ʼನಾಝಿ ಸೆಲ್ಯೂಟ್ʼ ನಂತೆ ಕೈ ಸನ್ನೆ : ಟ್ರಂಪ್ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಎಲಾನ್ ಮಸ್ಕ್ ವಿವಾದ

Update: 2025-01-21 11:20 IST
Photo of Elon musk doing Nazi Salute
Screengrab:X/@Jake_Hanrahan
  • whatsapp icon

ವಾಷಿಂಗ್ಟನ್ : ಡೊನಾಲ್ಡ್ ಟ್ರಂಪ್ ಅಮೆರಿಕದ 47ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಟೆಸ್ಲಾ ಒಡೆಯ ಎಲಾನ್ ಮಸ್ಕ್ ನಾಝಿ ಸೆಲ್ಯೂಟ್ ನಂತೆ ಕೈ ಸನ್ನೆಗಳನ್ನು ಮಾಡಿ ವಿವಾದಕ್ಕೆ ಗುರಿಯಾಗಿದ್ದಾರೆ.

ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಟ್ರಂಪ್ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ಎಲಾನ್ ಮಸ್ಕ್, ನವೆಂಬರ್ 4ರಂದು ನಡೆದ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವು ಸಾಮಾನ್ಯ ವಿಜಯವಲ್ಲ, ಇದು ಮಾನವ ನಾಗರಿಕತೆಯ ಹಾದಿಯಲ್ಲಿ ಒಂದು ವಿಶೇಷ ಹಾದಿಯಾಗಿತ್ತು. ಇದು ನಿಜಕ್ಕೂ ಮುಖ್ಯವಾಗಿತ್ತು. ಇದನ್ನು ಸಾಧ್ಯವಾಗಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಹೇಳಿದ್ದಾರೆ.

ನಂತರ ಮಸ್ಕ್ ತನ್ನ ಬಲಗೈಯನ್ನು ಎದೆಗಿಟ್ಟು ನಾಝಿ ಸೆಲ್ಯೂಟ್ ನಂತೆ ಕೈ ಸನ್ನೆಗಳನ್ನು ಮಾಡಿದ್ದಾರೆ. ಇದು ವ್ಯಾಪಕ ಟೀಕೆಗೆ ಕಾರಣವಾಗಿದೆ. ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಅಡಾಲ್ಫ್ ಹಿಟ್ಲರ್ ನಂತೆ ಎಲಾನ್ ಮಸ್ಕ್ ಸೆಲ್ಯೂಟ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಸನ್ನೆಯು ಇಸ್ರೇಲ್ ಮಾಧ್ಯಮಗಳಲ್ಲಿಯೂ ತೀವ್ರ ಟೀಕೆಗೆ ಗುರಿಯಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಬ್ರಿಟಿಷ್ ಪತ್ರಕರ್ತ, ನಿರೂಪಕ ಓವನ್ ಜೋನ್ಸ್, ಇದು ನಾಝಿ ಸೆಲ್ಯೂಟ್ ನಂತೆ ಕಾಣಲು ಸಾಧ್ಯವಿಲ್ಲ ಎಂದು ಎಕ್ಸ್ ನಲ್ಲಿನ ಪೋಸ್ಟ್ ನಲ್ಲಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News