ಎಲಾನ್ ಮಸ್ಕ್ ಅಮೆರಿಕದ ಅನಧಿಕೃತ ಅಧ್ಯಕ್ಷ ಎಂದ ಇಸ್ರೇಲ್ ಪ್ರಧಾನಿ
ಕ್ಯಾಲಿಫೋರ್ನಿಯಾ: ಕೃತಕ ಬುದ್ಧಿಮತ್ತೆಯಿಂದ ಎದುರಾಗಲಿರುವ ಗಂಭೀರ ಸ್ವರೂಪದ ಬೆದರಿಕೆಗಳಿಗೆ ಎಲಾನ್ ಮಸ್ಕ್ ಅವರ ಮಾರ್ಗದರ್ಶನ ಕೋರಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಎಲಾನ್ ಮಸ್ಕ್ ಅಮೆರಿಕಾ ಅಧ್ಯಕ್ಷರಿಗಿಂತ ಹೆಚ್ಚು ಬಲಿಷ್ಠ ಎಂಬ ಸುಳಿವನ್ನು ನೀಡಿದ್ದಾರೆ ಎಂದು independent.co.uk ಸುದ್ದಿ ಸಂಸ್ಥೆ ವರದಿ ಮಾಡಿದೆ.
ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಎಲಾನ್ ಮಸ್ಕ್‌ರೊಂದಿಗೆ ಸಂವಾದ ನಡೆಸಿರುವ ನೇತನ್ಯಾಹು, "ಈ ವ್ಯಕ್ತಿಗೆ ತಾನೇನು ಮಾತನಾಡುತ್ತಿದ್ದೇನೆ ಎಂಬ ಅರಿವಿದೆ ಎಂದು ನನ್ನ ಪತ್ನಿಗೆ ಹೇಳಿದ್ದೇನೆ. ಈತ ನಮ್ಮ ಕಾಲದ ಎಡಿಸನ್" ಎಂದು ಶ್ಲಾಘಿಸಿದ್ದಾರೆ.
"ನಾನು ಕಳೆದ ಬಾರಿ ಪರೀಕ್ಷಿಸಿದಾಗ ನೀವು ಅಮೆರಿಕಾ ಅಧ್ಯಕ್ಷರಾಗಿರಲಿಲ್ಲ. ಆದರೆ, ಹಾಗೆಂದು ನೀವು ಭಾವಿಸಿಕೊಳ್ಳಿ" ಎಂದೂ ಅವರು ತಮಾಷೆ ಮಾಡಿದ್ದಾರೆ. ಆಗ ಮಧ್ಯಪ್ರವೇಶಿಸಿರುವ ಎಲಾನ್ ಮಸ್ಕ್, "ಅಧಿಕೃತವಾಗಿಯಲ್ಲ" ಎಂದು ಉತ್ತರಿಸಿದ್ದಾರೆ.
ಆಗ, "ಅಧಿಕೃತವಾಗಿಯಲ್ಲ, ಸರಿ. ಹಾಗಾದರೆ, ನೀವು ಅನಧಿಕೃತ ಅಧ್ಯಕ್ಷ" ಎಂದು ನೆತನ್ಯಾಹು ಮತ್ತೊಮ್ಮೆ ಹಾಸ್ಯ ಮಾಡಿದ್ದಾರೆ.