ಮ್ಯಾನ್ಮಾರ್‍ನಲ್ಲಿ ಜನವರಿಯೊಳಗೆ ಸಾರ್ವತ್ರಿಕ ಚುನಾವಣೆ: ವರದಿ

Update: 2025-03-08 23:06 IST
ಮ್ಯಾನ್ಮಾರ್‍ನಲ್ಲಿ ಜನವರಿಯೊಳಗೆ ಸಾರ್ವತ್ರಿಕ ಚುನಾವಣೆ: ವರದಿ

PC : The Hindu

  • whatsapp icon

ಯಾಂಗಾನ್: ಮ್ಯಾನ್ಮಾರ್‍ನಲ್ಲಿ ಡಿಸೆಂಬರ್ ಅಥವಾ ಜನವರಿಯಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ ಎಂದು ಸೇನಾಡಳಿತದ ಮುಖ್ಯಸ್ಥರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

2021ರಲ್ಲಿ ಸೇನೆಯು ಕ್ಷಿಪ್ರದಂಗೆಯ ಮೂಲಕ ಸರಕಾರವನ್ನು ಪದಚ್ಯುತಗೊಳಿಸಿ ಅಧಿಕಾರ ವಶಕ್ಕೆ ಪಡೆದ ಬಳಿಕ ದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಸುವಂತೆ ಜಾಗತಿಕ ಸಮುದಾಯದಿಂದಲೂ ಆಗ್ರಹ ಹೆಚ್ಚಿತ್ತು.

ಡಿಸೆಂಬರ್ 2025 ಅಥವಾ ಜನವರಿ 2026ರ ಒಳಗೆ ಚುನಾವಣೆ ನಡೆಸಲು ಯೋಜಿಸಿದ್ದೇವೆ. ಚುನಾವಣೆ ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಯಲಿದ್ದು 53 ರಾಜಕೀಯ ಪಕ್ಷಗಳು ಸ್ಪರ್ಧಿಸುವುದನ್ನು ದೃಢಪಡಿಸಿವೆ. ಬೆಲಾರುಸ್‍ನ ತಂಡವನ್ನು ಚುನಾವಣಾ ವೀಕ್ಷಕರನ್ನಾಗಿ ಆಹ್ವಾನಿಸುತ್ತೇವೆ' ಎಂದು ಸೇನಾ ಮುಖ್ಯಸ್ಥ ಜನರಲ್ ಮಿನ್ ಆಂಗ್ ಹ್ಲಾಂಗ್‍ರನ್ನು ಉಲ್ಲೇಖಿಸಿ `ಗ್ಲೋಬಲ್ ನ್ಯೂ ಲೈಟ್ ಆಫ್ ಮ್ಯಾನ್ಮಾರ್' ವರದಿ ಮಾಡಿದೆ. ಬೆಲಾರುಸ್‍ಗೆ ಭೇಟಿ ನೀಡಿರುವ ಜನರಲ್ ಮಿನ್ ಆಂಗ್ ಆ ದೇಶದ ಅಧ್ಯಕ್ಷ ಅಲೆಕ್ಸಾಂಡರ್ ಲುಕಶೆಂಕೊ ಜತೆ ಮಾತುಕತೆ ನಡೆಸಿರುವುದಾಗಿ ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News