ರಫಾ ಕಾರ್ಯಾಚರಣೆ ಯೋಜನೆಗೆ ನೆತನ್ಯಾಹು ಅನುಮೋದನೆ
Update: 2024-03-16 16:45 GMT
ಜೆರುಸಲೇಮ್: ಯುದ್ಧಪೀಡಿತ ಗಾಝಾದ ಹೆಚ್ಚಿನ ಜನರು ಆಶ್ರಯ ಪಡೆದಿರುವ ರಫಾ ನಗರದಲ್ಲಿ ಕಾರ್ಯಾಚರಣೆ ನಡೆಸುವ ಇಸ್ರೇಲ್ ಮಿಲಿಟರಿಯ ಯೋಜನೆಯನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅನುಮೋದಿಸಿದ್ದಾರೆ.
ರಫಾ ನಗರದಲ್ಲಿರುವ ಜನರನ್ನು ತೆರವುಗೊಳಿಸಲು ಮತ್ತು ಅಲ್ಲಿ ಮಿಲಿಟರಿ ಕಾರ್ಯಾಚರಣೆ ನಡೆಸಲು ಮಿಲಿಟರಿ ಸನ್ನದ್ಧವಾಗಿದೆ .ಕಾರ್ಯಾಚರಣೆ ಯೋಜನೆಗೆ ಪ್ರಧಾನಿಯವರಿಂದ ಹಸಿರು ನಿಶಾನೆ ದೊರಕಿದೆ ಎಂದು ನೆತನ್ಯಾಹು ಕಚೇರಿಯ ಹೇಳಿಕೆ ತಿಳಿಸಿದೆ. ನಾಗರಿಕರ ರಕ್ಷಣೆಗೆ ಸೂಕ್ತ ಯೋಜನೆಯಿಲ್ಲದೆ ರಫಾದಲ್ಲಿ ಇಸ್ರೇಲ್ ಮಿಲಿಟರಿ ಕಾರ್ಯಾಚರಣೆ ದುರಂತಕ್ಕೆ ಕಾರಣವಾಗಬಹುದು ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಹೇಳಿದ್ದರು.