ಇಸ್ರೇಲ್‌ ಪ್ರಧಾನಿ ನೆತನ್ಯಾಹು ಭಾಷಣಕ್ಕೆ ಅಡ್ಡಿಪಡಿಸಿದ ಒತ್ತೆಯಾಳುಗಳ ಕುಟುಂಬ ಸದಸ್ಯರು

Update: 2023-12-26 08:34 GMT

ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು (File Photo:PTI)

ಟೆಲ್‌ ಅವೀವ್‌ : ಸೋಮವಾರ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರು ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಾತನಾಡಿದಾಗ ಗಾಝಾದಲ್ಲಿ ಹಮಾಸ್‌ ಒತ್ತೆಯಾಳಾಗಿರಿಸಿರುವ ಇಸ್ರೇಲಿಗರ ಕುಟುಂಬ ಸದಸ್ಯರು ತಮ್ಮ ಘೋಷಣೆಗಳ ಮೂಲಕ ಅವರ ಭಾಷಣಕ್ಕೆ ಅಡ್ಡಿಪಡಿಸಿದ ಘಟನೆ ವರದಿಯಾಗಿದೆ.

ಒತ್ತೆಯಾಳುಗಳ ಕುಟುಂಬ ಸದಸ್ಯರು ತಮ್ಮ ಪ್ರೀತಿಪಾತ್ರರ ಹೆಸರು, ಫೋಟೋ ಇರುವ ಭಿತ್ತಿಪತ್ರಗಳನ್ನು ಹಿಡಿದುಕೊಂಡು ನೆತನ್ಯಾಹು ಅವರ ವಿರುದ್ಧದ ತಮ್ಮ ಅಸಮಾಧಾನ ಹೊರಹಾಕಿದರು. ಒತ್ತೆಯಾಳುಗಳ ಬಿಡುಗಡೆಗಾಗಿ ಹೆಚ್ಚು ಸಮಯ ಬೇಕೆಂದು ನೆತನ್ಯಾಹು ಹೇಳಿದ್ದು ಬಾಧಿತ ಕುಟುಂಬಗಳ ಅಸಮಾಧಾನಕ್ಕೆ ಕಾರಣವಾಗಿದೆ.

“ಸಮಯವಿಲ್ಲ” ಎಂದು ಒತ್ತೆಯಾಳುಗಳ ಕುಟುಂಬ ಸದಸ್ಯರು ಸೋಮವಾರ ನೆತನ್ಯಾಹು ಅವರ ಭಾಷಣದ ವೇಳೆ ಬೊಬ್ಬೆ ಹಾಕುತ್ತಾ, “ಈಗ, ಈಗ, ಈಗಲೇ,” ಎಂದು ಘೋಷಣೆ ಕೂಗಿದ್ದಾರೆ.

“ನೀವು ಅವರನ್ನು ವಾಪಸ್‌ ತರುವಿರಿ ಎಂಬ ನಂಬಿಕೆಯಿದೆ, “80 ದಿನಗಳು, ಪ್ರತಿ ನಿಮಿಷ ನರಕಯಾತನೆ,” ಎಂಬ ಪೋಸ್ಟರ್‌ಗಳಿದ್ದರೆ ಇನ್ನು ಕೆಲವು “ಅವರು ನಿಮ್ಮ ಪುತ್ರಿಯಾಗಿದ್ದರೆ ಏನಾಗುತ್ತಿತ್ತು” ಎಂದೂ ಪ್ರಶ್ನಿಸಿವೆ.

ನಾವು ಸರ್ವ ಪ್ರಯತ್ನ ನಡೆಸುತ್ತಿದ್ದೇವೆ ಎಂದು ನೆತನ್ಯಾಹು ಹೇಳಿದರು. “ಯುದ್ಧ ಆರಂಭಗೊಂಡಂದಿನಿಂದ ಒತ್ತೆಯಾಳುಗಳ ಕುಟುಂಬಗಳ ಜೊತೆ ಮಾತನಾಡಿದ್ದೇನೆ, ಅವರ ಕಥೆಗಳನ್ನು ಆಲಿಸಿದ್ದೇನೆ,” ಎಂದು ಅವರು ಹೇಳಿದರು.

ಸದ್ಯ ಗಾಝಾದಲ್ಲಿ 129 ಒತ್ತೆಯಾಳುಗಳಿರಬೇಕೆಂದು ಅಂದಾಜಿಸಲಾಗಿದೆ. ಅವರಲ್ಲಿ 22 ಮಂದಿ ಸಾವನ್ನಪ್ಪಿದ್ದಾರೆಬ ಶಂಕೆಯಿದ್ದು ಅವರ ಮೃತದೇಹಗಳು ಈಗಲೂ ಗಾಝಾದಲ್ಲಿವೆ. ಉಳಿದ 107 ಮಂದಿ ಜೀವಂತವಾಗಿದ್ದಾರೆಂದು ತಿಳಿಯಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News