ಐಸಿಸಿಯ ಬಂಧನ ವಾರಂಟ್ ಮೂಲಕ ಇಸ್ರೇಲನ್ನು ರಕ್ಷಿಸುವ ನನ್ನ ಪ್ರಯತ್ನವನ್ನು ತಡೆಯಲು ಸಾಧ್ಯವಿಲ್ಲ: ನೆತನ್ಯಾಹು

Update: 2024-11-22 22:11 IST
Photo of Netanyahu

ಬೆಂಜಮಿನ್ ನೆತನ್ಯಾಹು | PC : PTI

  • whatsapp icon

ಟೆಲ್ಅವೀವ್ : ಗಾಝಾದಲ್ಲಿ ಯುದ್ಧಾಪರಾಧ ಹಾಗೂ ಮಾನವೀಯತೆಯ ವಿರುದ್ಧ ನಡವಳಿಕೆಯ ಆರೋಪದಲ್ಲಿ ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ (ಐಸಿಸಿ)ವು ತನಗೆ ಜಾರಿಗೊಳಿಸಿದ ಬಂಧನ ವಾರಂಟ್, ಇಸ್ರೇಲ್ ಅನ್ನು ರಕ್ಷಿಸುವ ತನ್ನ ಪ್ರಯತ್ನವನ್ನು ತಡೆಯಲಾರದೆಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ತಿಳಿಸಿದ್ದಾರೆ.

ಅಂತರರಾಷ್ಟ್ರೀಯ ನ್ಯಾಯಾಲಯದ ಈ ನಿರ್ಧಾರವು, ರಾಷ್ಟ್ರಗಳ ಇತಿಹಾಸದಲ್ಲೇ ಅತ್ಯಂತ ಕರಾಳದಿನವಾಗಿದೆ ಎಂದವರು ಪ್ರತಿಕ್ರಿಯಿಸಿದ್ದಾರೆ.

‘‘ಹೇಗ್ನಲ್ಲಿರುವ ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯವನ್ನು ಮಾನವೀಯತೆಯನ್ನು ರಕ್ಷಿಸುವ ಉದ್ದೇಶದಿಂದ ಸ್ಥಾಪಿಸಲಾಗಿತ್ತು. ಆದರೆ ಇಂದು ಅದು ಮಾನವೀಯತೆಯ ಶತ್ರುವಾಗಿದೆ’’ ಎಂದವರು ಹೇಳಿದ್ದಾರೆ. ತನ್ನ ವಿರುದ್ಧ ಐಸಿಸಿ ಹೊರಿಸಿರುವ ಆರೋಪಗಳು ಸಂಪೂರ್ಣ ಆಧಾರರಹಿತವಾಗಿವೆ ಎಂದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಾಗೂ ತನಗೆ, ಅಂತರರಾಷ್ಟ್ರೀಯ ನ್ಯಾಯಾಲಯವು ಬಂಧನ ವಾರಂಟ್ ಜಾರಿಗೊಳಿಸಿರುವುದು ನೈತಿಕತೆಗೆ ಹಚ್ಚಿರುವ ಕಳಂಕವೆಂದು ಇಸ್ರೇಲ್ನ ರಕ್ಷಣಾ ಸಚಿವ ಇಸ್ರಾಯೇಲ್ ಕಾಯೆಟ್ಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಐಸಿಸಿಯ ಈ ನಡೆಯುವ ಇರಾನ್ ಹಾಗೂ ಅದು ಪೋಷಿಸುತ್ತಿರುವ ಸಂಘಟನೆಗಳಿಗೆ ನೆರವಾಗುತ್ತದೆ ಎಂದವರು ಆಪಾದಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News