ರಫಾ ಮೇಲಿನ ದಾಳಿಯ ಬಗ್ಗೆ ಇಸ್ರೇಲ್ ಕ್ಯಾಬಿನೆಟ್ ಚರ್ಚೆ
ಜೆರುಸಲೇಂ: ಖಲೀಲ್ ಅವರ ಹೇಳಿಕೆಗೆ ಫೆಲೆಸ್ತೀನ್ ಲಿಬರೇಷನ್ ಆರ್ಗನೈಸೇಷನ್ (ಪಿಎಲ್‍ಒ) ಅಥವಾ ಅಂತರಾಷ್ಟ್ರೀಯ ಮಾನ್ಯತೆ ಪಡೆದ ಸ್ವಯಂ ಆಡಳಿತದ ಸರಕಾರ ಫೆಲೆಸ್ತೀನಿಯನ್ ಪ್ರಾಧಿಕಾರದಿಂದ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಗಾಝಾದಲ್ಲಿ ಫೆಲೆಸ್ತೀನಿಯನ್ ಪ್ರಾಧಿಕಾರದ ಸರಕಾರವನ್ನು ಪದಚ್ಯುತಗೊಳಿಸಿರುವ ಹಮಾಸ್ 2007ರಿಂದ ಆಡಳಿತ ನಿರ್ವಹಿಸುತ್ತಿದೆ. ಗಾಝಾದ ನಿಯಂತ್ರಣ ಹಮಾಸ್ ಕೈವಶವಾದ ಬಳಿಕ ಫೆಲೆಸ್ತೀನಿಯನ್ ಅಥಾರಿಟಿಯ ಆಡಳಿತ ಇಸ್ರೇಲ್ ಆಕ್ರಮಿತ ಪಶ್ಚಿಮ ದಂಡೆಯ ಅರೆ ಸ್ವಾಯತ್ತ ಪ್ರದೇಶಕ್ಕೆ ಸೀಮಿತವಾಗಿದೆ.
ಈ ಮಧ್ಯೆ, ಗಾಝಾ ಪಟ್ಟಿಯ ರಫಾದಲ್ಲಿ ಪದಾತಿ ದಳದ ಕಾರ್ಯಾಚರಣೆಯ ಬಗ್ಗೆ ಇಸ್ರೇಲ್ ಹೆಚ್ಚಿನ ಗಮನ ಹರಿಸಿದೆ. ಗುರುವಾರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನಾಹ್ಯು ನೇತೃತ್ವದಲ್ಲಿ ಸಭೆ ಸೇರಿದ ಯುದ್ಧ ಕ್ಯಾಬಿನೆಟ್ ರಫಾದಲ್ಲಿ ಪದಾತಿ ದಳದ ಕಾರ್ಯಾಚರಣೆಯ ಬಗ್ಗೆ ಚರ್ಚಿಸಿದ್ದಾರೆ ಎಂದು ವರದಿಯಾಗಿದೆ. ಅಕ್ಟೋಬರ್ 7ರಂದು ದಕ್ಷಿಣ ಇಸ್ರೇಲ್ ಮೇಲೆ ಹಮಾಸ್ ಸಶಸ್ತ್ರ ಹೋರಾಟಗಾರರ ಗುಂಪು ಅನಿರೀಕ್ಷಿತ ಆಕ್ರಮಣ ನಡೆಸಿದ್ದಕ್ಕೆ ಪ್ರತಿಯಾಗಿ ಗಾಝಾ ಪಟ್ಟಿಯ ಮೇಲೆ ಇಸ್ರೇಲ್ ನಡೆಸುತ್ತಿರುವ ಪ್ರತೀಕಾರ ದಾಳಿಯಲ್ಲಿ ನೆಲೆ ಕಳೆದುಕೊಂಡಿರುವ ಲಕ್ಷಾಂತರ ಫೆಲೆಸ್ತೀನೀಯರು ರಫಾ ನಗರದಲ್ಲಿ ತಾತ್ಕಾಲಿಕ ಶಿಬಿರದಲ್ಲಿ ಆಶ್ರಯ ಪಡೆದಿದ್ದಾರೆ. ಇದೀಗ ಇಸ್ರೇಲ್ ರಫಾದ ಮೇಲೆ ಬೃಹತ್ ಕಾರ್ಯಾಚರಣೆ ನಡೆಸಿದರೆ ವ್ಯಾಪಕ ಪ್ರಮಾಣದಲ್ಲಿ ನಾಗರಿಕರ ಸಾವು-ನೋವಿಗೆ ಕಾರಣವಾಗಲಿದೆ ಎಂದು ಅಂತರಾಷ್ಟ್ರೀಯ ಸಮುದಾಯ ಆತಂಕ ವ್ಯಕ್ತಪಡಿಸಿದೆ. ರಫಾದಲ್ಲಿ ನಾಗರಿಕರ ಸಾವು ನೋವನ್ನು ತಪ್ಪಿಸುವ ರೀತಿಯಲ್ಲಿ ಆಕ್ರಮಣ ನಡೆಸುವಂತೆ ಅಮೆರಿಕವೂ ಇಸ್ರೇಲ್‍ಗೆ ಸಲಹೆ ನೀಡಿದೆ.