ಹಿಜ್ಬುಲ್ಲಾ ಡ್ರೋನ್ ಘಟಕದ ಮುಖ್ಯಸ್ಥರನ್ನು ಗುರಿಯಾಗಿಸಿ ಇಸ್ರೇಲ್ ದಾಳಿ

Update: 2024-09-26 17:25 GMT

pti

ಬೈರೂತ್ : ಇಸ್ರೇಲ್ ಪಡೆಗಳು ಗುರುವಾರ ಲೆಬನಾನ್ ರಾಜಧಾನಿ ಬೈರೂತ್‍ನಲ್ಲಿ ಹಿಜ್ಬುಲ್ಲಾ ಡ್ರೋನ್ ಘಟಕದ ಮುಖ್ಯಸ್ಥರನ್ನು ಗುರಿಯಾಗಿಸಿ ದಾಳಿ ನಡೆಸಿರುವುದಾಗಿ ವರದಿಯಾಗಿದೆ.

ಹಿಜ್ಬುಲ್ಲಾ ಡ್ರೋನ್ ಘಟಕದ ಕಮಾಂಡರ್, ಅಬು ಸಲೇಹ್ ಎಂದು ಕರೆಯಲ್ಪಡುವ ಮುಹಮ್ಮದ್ ಸ್ರೂರ್ ಅವರನ್ನು ಗುರಿಯಾಗಿಸಿ ಇಸ್ರೇಲ್ ದಾಳಿ ನಡೆಸಿದೆ ಎಂದು ಹಿಜ್ಬುಲ್ಲಾ ಅಧಿಕಾರಿಗಳು ಹೇಳಿದ್ದು ಹೆಚ್ಚಿನ ವಿವರ ಒದಗಿಸಿಲ್ಲ.

ಬೈರೂತ್‍ನಲ್ಲಿ 10 ಅಂತಸ್ತಿನ ಕಟ್ಟಡದಲ್ಲಿದ್ದ ವಸತಿ ಅಪಾರ್ಟ್‍ಮೆಂಟ್ ಅನ್ನು ಗುರಿಯಾಗಿಸಿ 3 ಕ್ಷಿಪಣಿಗಳಿಂದ ದಾಳಿ ನಡೆಸಲಾಗಿದೆ. ಈ ದಾಳಿಯಲ್ಲಿ ಇಬ್ಬರು ಹತರಾಗಿದ್ದಾರೆ ಎಂದು ಲೆಬನಾನ್ ಸರಕಾರಿ ಸ್ವಾಮ್ಯದ `ನ್ಯಾಷನಲ್ ನ್ಯೂಸ್ ಏಜೆನ್ಸಿ' ವರದಿ ಮಾಡಿದೆ.    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News