ಗಾಝಾದಲ್ಲಿ ಪಕ್ಷಾತೀತ ಸ್ವತಂತ್ರ ಸರಕಾರ : ಹಮಾಸ್ ಪ್ರಸ್ತಾವನೆ
Update: 2024-07-12 15:54 GMT
ಗಾಝಾ : ಪಕ್ಷಾತೀತ ಸ್ವತಂತ್ರ ಸರಕಾರವು ಯುದ್ಧಾನಂತರದ ಗಾಝಾದಲ್ಲಿ ಮತ್ತು ಇಸ್ರೇಲ್ ಆಕ್ರಮಿತ ಪಶ್ಚಿಮದಂಡೆಯಲ್ಲಿ ಆಡಳಿತ ನಡೆಸಬೇಕು ಎಂಬ ಸಲಹೆಯನ್ನು ಹಮಾಸ್ ಮುಂದಿರಿಸಿದೆ.
ಪಕ್ಷೇತರ ರಾಷ್ಟ್ರೀಯ ಸರಕಾರವು ಯುದ್ಧದ ನಂತರ ಗಾಝಾ ಮತ್ತು ಪಶ್ಚಿಮದಂಡೆಯನ್ನು ನಿರ್ವಹಿಸಬೇಕೆಂಬ ಪ್ರಸ್ತಾವನೆಯನ್ನು ಮುಂದಿರಿಸಿದ್ದೇವೆ. ಯುದ್ಧದ ಬಳಿಕ ಗಾಝಾದ ಆಡಳಿತವು ಯಾವುದೇ ಬಾಹ್ಯ ಹಸ್ತಕ್ಷೇಪಕ್ಕೆ ಅವಕಾಶವಿಲ್ಲದೆ ಫೆಲೆಸ್ತೀನ್ನಯ ಆಂತರಿಕ ವಿಷಯವಾಗಬೇಕು. ಯುದ್ಧ ಮುಗಿದ ಬಳಿಕ ನಾವು ಯಾರೊಂದಿಗೂ ಮಾತುಕತೆ ನಡೆಸುವುದಿಲ್ಲ ' ಎಂದು ಹಮಾಸ್ನ ರಾಜಕೀಯ ವಿಭಾಗದ ಮೂಲಗಳು ಹೇಳಿವೆ.