ಗಡಿಭಾಗದ ಸಂಪರ್ಕ ರಸ್ತೆಯನ್ನು ಸ್ಫೋಟಿಸಿದ ಉತ್ತರ ಕೊರಿಯಾ
ಸಿಯೋಲ್ : ಉತ್ತರ ಕೊರಿಯಾವು ಎರಡು ಕೊರಿಯಾಗಳ ನಡುವಿನ ಗಡಿಯ ಬದಿಯಲ್ಲಿರುವ ಸಂಪರ್ಕ ರಸ್ತೆಯ ಒಂದು ಭಾಗವನ್ನು ಸ್ಫೋಟಿಸಿದೆ ಎಂದು ದಕ್ಷಿಣ ಕೊರಿಯಾದ ಸೇನಾಧಿಕಾರಿ ಮಂಗಳವಾರ ಹೇಳಿದ್ದಾರೆ.
ಉಭಯ ದೇಶಗಳನ್ನು ವಿಭಜಿಸುವ ಗಡಿರೇಖೆಯ ಉತ್ತರಕ್ಕೆ ರಸ್ತೆಯ ಕೆಲವು ಭಾಗಗಳನ್ನು ಮಂಗಳವಾರ ಮಧ್ಯಾಹ್ನ ಸ್ಫೋಟಿಸಲಾಗಿದೆ. ಈ ಬೆಳವಣಿಗೆಯ ಬಳಿಕ ನಮ್ಮ ಸೇನೆಯು ಕಣ್ಗಾವಲು ಮತ್ತು ಸಿದ್ಧತೆಯನ್ನು ಹೆಚ್ಚಿಸಿದೆ ಎಂದು ಹೇಳಿಕೆ ತಿಳಿಸಿದೆ.
ದಕ್ಷಿಣ ಕೊರಿಯಾವು ತನ್ನ ರಾಜಧಾನಿಯತ್ತ ಡ್ರೋನ್ಗ ಳನ್ನು ಉಡಾಯಿಸಿದ್ದು ಈ ಡ್ರೋನ್ಗನಳು ಉತ್ತರ ಕೊರಿಯ ಆಡಳಿತದ ವಿರುದ್ಧ ಜನರನ್ನು ಪ್ರಚೋದಿಸುವ ಕರಪತ್ರಗಳನ್ನು ಉದುರಿಸಿವೆ. ದಕ್ಷಿಣ ಕೊರಿಯಾದ ಈ ಪ್ರಚೋದನೆ ರಾಜಕೀಯ ಮತ್ತು ಮಿಲಿಟರಿ ಸಂಘರ್ಷಕ್ಕೆ ಕಾರಣವಾಗಬಹುದು ಎಂದು ಉತ್ತರ ಕೊರಿಯಾ ಸರಕಾರ ಶುಕ್ರವಾರ ಆರೋಪಿಸಿತ್ತು ಮತ್ತು ಇದಕ್ಕೆ ಪ್ರತೀಕಾರ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿತ್ತು. ಈ ಆರೋಪವನ್ನು ದಕ್ಷಿಣ ಕೊರಿಯಾ ನಿರಾಕರಿಸಿದೆ.
ಈ ಮಧ್ಯೆ, ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ರಕ್ಷಣಾ ಇಲಾಖೆ ಮತ್ತು ಭದ್ರತಾ ಅಧಿಕಾರಿಗಳ ಜತೆ ಉನ್ನತ ಮಟ್ಟದ ಸಭೆ ನಡೆಸಿದ್ದು ದೇಶದ ಸಾರ್ವಭೌಮತ್ವವನ್ನು ಉಲ್ಲಂಘಿಸಿದ ಶತ್ರುಗಳ ಗಂಭೀರ ಪ್ರಚೋದನೆಗೆ ನೀಡಬೇಕಾದ ಪ್ರತಿಕ್ರಿಯೆ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಉತ್ತರ ಕೊರಿಯಾ ಸರಕಾರಿ ಸ್ವಾಮ್ಯದ ಕೆಸಿಎನ್ಎತ ಸುದ್ದಿಸಂಸ್ಥೆ ವರದಿ ಮಾಡಿದೆ.