ಹಮಾಸ್ ವಿರುದ್ಧದ ಕಾರ್ಯಾಚರಣೆ ಇನ್ನಷ್ಟು ತೀವ್ರ: ನೆತನ್ಯಾಹು ಘೋಷಣೆ
Update: 2025-04-16 20:51 IST

ಬೆಂಜಮಿನ್ ನೆತನ್ಯಾಹು | PC : NDTV
ಜೆರುಸಲೇಂ: ಮಂಗಳವಾರ ಉತ್ತರ ಗಾಝಾಕ್ಕೆ ಭೇಟಿ ನೀಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಯುದ್ಧದ ಎಲ್ಲಾ ಉದ್ದೇಶಗಳನ್ನು ಸಾಧಿಸುವವರೆಗೆ ಹಮಾಸ್ ವಿರುದ್ಧ ಮಿಲಿಟರಿ ಕಾರ್ಯಾಚರಣೆಯನ್ನು ತೀವ್ರಗೊಳಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ರಕ್ಷಣಾ ಸಚಿವ ಇಸ್ರೇಲ್ ಕಾಟ್ಝ್ ಮತ್ತು ಮಿಲಿಟರಿ ಮುಖ್ಯಸ್ಥ ಇಯಾಲ್ ಝಾಮಿರ್ ಅವರೊಂದಿಗೆ ಗಾಝಾಕ್ಕೆ ಆಗಮಿಸಿದ ನೆತನ್ಯಾಹುಗೆ ಐಡಿಎಫ್ ಕಮಾಂಡರ್ ಗಳು ಭದ್ರತಾ ಸ್ಥಿತಿಗತಿಗಳ ಬಗ್ಗೆ ಮಾಹಿತಿ ನೀಡಿದರು. ಗಾಝಾ ಪಟ್ಟಿಯಲ್ಲಿ ಇಸ್ರೇಲಿ ಪಡೆಗಳು ಅಸಾಧಾರಣ ಕಾರ್ಯ ನಿರ್ವಹಿಸುತ್ತಿವೆ ಎಂದು ಶ್ಲಾಘಿಸಿದ ನೆತನ್ಯಾಹು, ಹಮಾಸ್ ಇನ್ನಷ್ಟು ಹೊಡೆತ ತಿನ್ನಲಿದೆ ಎಂದು ಹೇಳಿದರು. ಎಲ್ಲಾ ಒತ್ತೆಯಾಳುಗಳನ್ನೂ ಬಿಡುಗಡೆಗೊಳಿಸಲು ಒಪ್ಪುವವರೆಗೆ ಹಮಾಸ್ ಮೇಲಿನ ಒತ್ತಡವನ್ನು ಹೆಚ್ಚಿಸುವಂತೆ ರಕ್ಷಣಾ ಸಚಿವರು ಸೂಚಿಸಿದರು ಎಂದು ಇಸ್ರೇಲ್ ಅಧ್ಯಕ್ಷರ ಕಚೇರಿ ಹೇಳಿಕೆ ನೀಡಿದೆ.