ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಕ್ಷವನ್ನು ನಿಷೇಧಿಸಲು ಪಾಕ್ ಸರ್ಕಾರ ನಿರ್ಧಾರ
Update: 2024-07-15 16:12 IST

ಇಮ್ರಾನ್ ಖಾನ್ (Photo: PTI)
ಇಸ್ಲಾಮಾಬಾದ್: ಸರ್ಕಾರ ವಿರೋಧಿ ಚಟುವಟಿಕೆಗಳಲ್ಲಿ ಶಾಮೀಲಾಗಿದೆ ಎಂಬ ಆರೋಪದ ಮೇಲೆ ಪಾಕಿಸ್ತಾನ ಸರ್ಕಾರವು ತಾನು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಪಕ್ಷವನ್ನು ನಿಷೇಧಿಸುವುದಾಗಿ ಇಂದು ಘೋಷಿಸಿದೆ.
ದೇಶದ ಮಾಹಿತಿ ಸಚಿವ ಅತ್ತಾವುಲ್ಲಾ ತರಾರ್ ಈ ಮಾಹಿತಿ ನೀಡಿರುವುದಾಗಿ ʼದಿ ನ್ಯೂಸ್ ಇಂಟರ್‌ನ್ಯಾಷನಲ್ʼ ವರದಿ ಮಾಡಿದೆ.
ಹಲವು ಪ್ರಕರಣಗಳನ್ನು ಎದುರಿಸುತ್ತಿರುವ ಇಮ್ರಾನ್ ಖಾನ್ ಪ್ರಸ್ತುತ ರಾವಲ್ಪಿಂಡಿಯಲ್ಲಿರುವ ಅದಿಯಾಲ ಕಾರಾಗೃಹದಲ್ಲಿದ್ದಾರೆ.
ಖಾನ್ ಅವರ ಪಕ್ಷದ ಮೇಲೆ ನಿಷೇಧ ಹೇರಲು ಸರ್ಕಾರದ ಬಳಿ ಸ್ಪಷ್ಟ ಪುರಾವೆಗಳಿವೆ, ಪಕ್ಷದ ವಿರುದ್ಧ ಸರ್ಕಾರ ಕ್ರಮಕೈಗೊಳ್ಳಲಿದೆ ಎಂದು ಸಚಿವರು ಹೇಳಿದ್ದಾರೆ.
ಅಕ್ರಮ ವಿವಾಹ ಪ್ರಕರಣದಲ್ಲಿ ಹಾಗೂ ಮೀಸಲು ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಇಮ್ರಾನ್ ಖಾನ್ ಪರ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಿದ ನಂತರದ ಬೆಳವಣಿಗೆ ಇದಾಗಿದೆ.