ಶಾಂತಿಗೆ ಆದ್ಯತೆಯನ್ನು ದೌರ್ಬಲ್ಯವೆಂದು ಪರಿಗಣಿಸಬಾರದು: ಪಾಕ್ ಪ್ರಧಾನಿ
Update: 2025-04-27 22:40 IST
ಶಹಬಾಝ್ ಶರೀಫ್ | PHOTO : PTI
ಇಸ್ಲಾಮಾಬಾದ್: ತಮ್ಮ ದೇಶವು ಯಾವತ್ತೂ ಶಾಂತಿಗೆ ಆದ್ಯತೆ ನೀಡುತ್ತದೆ. ಆದರೆ ಇದನ್ನು ದೌರ್ಬಲ್ಯವೆಂದು ಪರಿಗಣಿಸಬಾರದು ಎಂದು ಪಾಕಿಸ್ತಾನದ ಪ್ರಧಾನಿ ಶಹಬಾಝ್ ಷರೀಫ್ ಹೇಳಿದ್ದಾರೆ.
ಪಾಕಿಸ್ತಾನದ ಪಡೆಗಳು ತಾಯ್ನಾಡಿನ ಪ್ರತೀ ಇಂಚನ್ನೂ ರಕ್ಷಿಸಲು ಸನ್ನದ್ಧವಾಗಿವೆ. ಸ್ವ-ನಿರ್ಣಯದ ಹಕ್ಕಿಗಾಗಿ ಕಾಶ್ಮೀರದ ಜನತೆ ನಡೆಸುತ್ತಿರುವ ಹೋರಾಟಕ್ಕೆ ಪಾಕಿಸ್ತಾನದ ಬೆಂಬಲ ಮುಂದುವರಿಯಲಿದೆ ಎಂದು ಷರೀಫ್ ಹೇಳಿರುವುದಾಗಿ ವರದಿಯಾಗಿದೆ.
ಪಹಲ್ಗಾಮ್ ದಾಳಿಯ ಬಗ್ಗೆ ತಟಸ್ಥ ತನಿಖೆ ನಡೆಸಬೇಕೆಂದು ಆಗ್ರಹಿಸಿರುವ ಪಾಕ್ ಪ್ರಧಾನಿ, ತಟಸ್ಥ, ಪಾರದರ್ಶಕ ತನಿಖೆಯನ್ನು ತಮ್ಮ ದೇಶ ಸದಾ ಬೆಂಬಲಿಸುತ್ತದೆ ಎಂದಿದ್ದಾರೆ.