ಚೀನಾದಲ್ಲಿ ಪಾಕ್ ವಿದ್ಯಾರ್ಥಿಗಳಿಗೆ ಕೃಷಿ ತರಬೇತಿ: ಪ್ರಧಾನಿ ಶಹಬಾಝ್ ಷರೀಫ್

Update: 2024-06-09 17:39 GMT

Photo : timesofindia

ಬೀಜಿಂಗ್, ಜೂ.9: ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಕೃಷಿ ಕ್ಷೇತ್ರದಲ್ಲಿ ಆಧುನಿಕ ತರಬೇತಿ ಪಡೆಯಲು ಸುಮಾರು 1 ಸಾವಿರ ವಿದ್ಯಾರ್ಥಿಗಳನ್ನು ಚೀನಾಕ್ಕೆ ಕಳುಹಿಸಲಾಗುವುದು ಎಂದು ಪಾಕಿಸ್ತಾನ ಪ್ರಧಾನಿ ಶಹಬಾಝ್ ಷರೀಫ್ ಘೋಷಿಸಿದ್ದಾರೆ.

ಚೀನಾಕ್ಕೆ 5 ದಿನಗಳ ಅಧಿಕೃತ ಭೇಟಿಯನ್ನು ಶನಿವಾರ ಮುಕ್ತಾಯಗೊಳಿಸಿದ ಸಂದರ್ಭ ಮಾಧ್ಯಮದವರ ಜತೆ ಮಾತನಾಡಿದ ಷರೀಫ್, ಪಾಕಿಸ್ತಾನದಲ್ಲಿ ಕ್ಯಾಂಪಸ್ ಆರಂಭಿಸುವಂತೆ ಚೀನಾದ ನಾರ್ಥ್ವೆಸ್ಟ್ ಕೃಷಿ ಮತ್ತು ಅರಣ್ಯ ವಿವಿಯನ್ನು ಆಹ್ವಾನಿಸಿರುವುದಾಗಿ ಹೇಳಿದ್ದಾರೆ. ಚೀನಾದ ಅಧ್ಯಕ್ಷ ಕ್ಸಿಜಿನ್ ಪಿಂಗ್ ಜತೆಗಿನ ಮಾತುಕತೆಯ ಸಂದರ್ಭ ಬಹು ಶತಕೋಟಿ ಡಾಲರ್ ಯೋಜನೆಯಾದ ಚೀನಾ-ಪಾಕಿಸ್ತಾನ್ ಇಕನಾಮಿಕ್ ಕಾರಿಡಾರ್(ಸಿಪಿಇಸಿ)ನ ಉನ್ನತೀಕರಣದ ಕುರಿತು ಒಮ್ಮತವನ್ನು ದೃಢಪಡಿಸಿದರು ಎಂದು ಜಿಯೊ ನ್ಯೂಸ್ ವರದಿ ಮಾಡಿದೆ. ಈ ಸಭೆಯಲ್ಲಿ ಎರಡೂ ದೇಶಗಳ ಸಚಿವರು ಹಾಗೂ ಅಧಿಕಾರಿಗಳ ಉನ್ನತ ಮಟ್ಟದ ನಿಯೋಗ ಪಾಲ್ಗೊಂಡಿತ್ತು ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News