ಕೆನಡಾದಲ್ಲಿ ಖಾಲಿಸ್ತಾನಿಗಳಿಗೆ ಪಾಕ್ ಬೆಂಬಲ : ಕೆನಡಾ ಗುಪ್ತಚರ ಇಲಾಖೆ ನಿರ್ದೇಶಕರ ಹೇಳಿಕೆ

Update: 2024-10-16 14:35 GMT

ಒಟ್ಟಾವ : ಕೆನಡಾದಲ್ಲಿ ಖಾಲಿಸ್ತಾನ್ ಚಟುವಟಿಕೆಗೆ ಪಾಕಿಸ್ತಾನ ಬೆಂಬಲ ನೀಡುತ್ತಿದೆ ಮತ್ತು ದೇಶದ ರಾಜಕೀಯದ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದೆ ಎಂದು ಕೆನಡಾದ ಗುಪ್ತಚರ ಇಲಾಖೆಯ ನಿರ್ದೇಶಕಿ ವೆನೆಸಾ ಲಾಯ್ಡ್ ಹೇಳಿದ್ದಾರೆ.

`ಕೆನಡಾದಲ್ಲಿ ವಿದೇಶಿ ಹಸ್ತಕ್ಷೇಪದ ಬಗ್ಗೆ ತನಿಖೆ ನಡೆಸುವ ಆಯೋಗದ ಎದುರು ಕಳೆದ ತಿಂಗಳು ವೆನೆಸಾ ಲಾಯ್ಡ್ ನೀಡಿರುವ ಹೇಳಿಕೆಯ ವೀಡಿಯೊ ಈಗ ವೈರಲ್ ಆಗುತ್ತಿದೆ. ` ಭಾರತದ ಪ್ರಭಾವವನ್ನು ಮಸುಕಾಗಿಸಲು ಪಾಕಿಸ್ತಾನ ನಿರಂತರ ಪ್ರಯತ್ನ ನಡೆಸುತ್ತಿದೆ. ಪಾಕಿಸ್ತಾನದ ಪ್ರಭಾವವು ಖಾಲಿಸ್ತಾನ್ ಉಗ್ರವಾದದ ಬೆಂಬಲದೊಂದಿಗೆ ನೇರವಾಗಿ ಸಂಪರ್ಕಿಸಿದೆ ಎಂದವರು ಹೇಳಿಕೆ ನೀಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News