ಖಾಲಿಸ್ತಾನ್ ವಿರುದ್ಧ ಟೀಕೆ | ಕೆನಡಾ ಸಂಸದರಿಗೆ ಪನ್ನೂನ್ ಬೆದರಿಕೆ

Update: 2024-10-14 21:20 IST
ಖಾಲಿಸ್ತಾನ್ ವಿರುದ್ಧ ಟೀಕೆ | ಕೆನಡಾ ಸಂಸದರಿಗೆ ಪನ್ನೂನ್ ಬೆದರಿಕೆ

Photo: X/ firstpost

  • whatsapp icon

ಒಟ್ಟಾವ : ಕೆನಡಾದಲ್ಲಿ ಖಾಲಿಸ್ತಾನ್ ತೀವ್ರವಾದ ನಿರಂತರವಾಗಿ ಹೆಚ್ಚುತ್ತಿದೆ ಎಂದು ಟೀಕಿಸಿದ್ದ ಸಂಸದ ಚಂದ್ರ ಆರ್ಯಗೆ ಸಿಖ್ಸ್ ಫಾರ್ ಜಸ್ಟಿಸ್ ಜಸ್ಟಿಸ್ (ಎಸ್‍ಎಫ್‍ಜೆ) ಸಂಘಟನೆಯ ಮುಖಂಡ ಗುರುಪತ್ವಂತ್ ಸಿಂಗ್ ಬೆದರಿಕೆ ಒಡ್ಡಿರುವುದಾಗಿ ವರದಿಯಾಗಿದೆ.

ಕೆನಡಾದಲ್ಲಿ ಹಿಂದುಗಳನ್ನು ಗುರಿಯಾಗಿಸಿದ ಹಿಂಸಾಚಾರ ಉಲ್ಬಣಿಸಿದ್ದು ಇದಕ್ಕೆ ಖಾಲಿಸ್ತಾನ್ ತೀವ್ರವಾದ ಕಾರಣ ಎಂದು ಇತ್ತೀಚೆಗೆ ಚಂದ್ರ ಆರ್ಯ ಕಳವಳ ವ್ಯಕ್ತಪಡಿಸಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿ ಎರಡು ನಿಮಿಷದ ಆಡಿಯೊ ಸಂದೇಶ ಬಿಡುಗಡೆಗೊಳಿಸಿರುವ ಪನ್ನೂನ್ ` ಚಂದ್ರ ಆರ್ಯ ವಿರುದ್ಧ ದೇಶದ್ರೋಹದ ಆರೋಪ ದಾಖಲಿಸುವಂತೆ ಆಗ್ರಹಿಸಿದ್ದು ಚಂದ್ರ ಆರ್ಯ ಭಾರತ ಸರಕಾರದ ಮುಖವಾಣಿಯಾಗಿದ್ದು ಖಾಲಿಸ್ತಾನ್ ಬೆಂಬಲಿಗರ ವಿರುದ್ಧ ಸುಳ್ಳು ಮಾಹಿತಿ ಪ್ರಸಾರ ಮಾಡುತ್ತಿದ್ದಾರೆ' ಎಂದು ಆರೋಪಿಸಿದ್ದಾನೆ.

`ತನ್ನ ನಿಲುವಿಗಾಗಿ ಆರ್ಯ ಪರಿಣಾಮ ಎದುರಿಸಬೇಕಾಗುತ್ತದೆ. ಸಂಸದ ಆರ್ಯರ ಅಂತಿಮ ಹಣೆಬರಹಕ್ಕೆ ಕಾಯೋಣ' ಎಂದು ಪನ್ನೂನ್ ಬೆದರಿಕೆ ಸಂದೇಶ ರವಾನಿಸಿದ್ದಾನೆ ಎಂದು ಮೂಲಗಳನ್ನು ಉಲ್ಲೇಖಿಸಿ ಸಿಎನ್‍ಎನ್-ನ್ಯೂಸ್ 18 ವರದಿ ಮಾಡಿದೆ.

 

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News