ಕಾಶ್ಮೀರ ಸಮಸ್ಯೆಗೆ ಶಾಂತಿಯುತ ಪರಿಹಾರ: ವಿಶ್ವಸಂಸ್ಥೆ ಕರೆ
Update: 2024-08-08 15:28 GMT
ವಿಶ್ವಸಂಸ್ಥೆ: ಕಾಶ್ಮೀರ ಕುರಿತಾದ ನಮ್ಮ ನಿಲುವು ಬದಲಾಗಿಲ್ಲ. ಭಾರತ, ಪಾಕಿಸ್ತಾನದ ನಡುವಿನ ಕಾಶ್ಮೀರ ಸಮಸ್ಯೆಯನ್ನು ಶಾಂತಿಯುತ ರೀತಿಯಲ್ಲಿ ಬಗೆಹರಿಸಿಕೊಳ್ಳಬೇಕು ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಹೇಳಿದ್ದಾರೆ.
ಯಾವುದೇ ಮೂರನೇ ಪಕ್ಷದ ಮಧ್ಯಪ್ರವೇಶವನ್ನು ತಿರಸ್ಕರಿಸುವ 1972ರ ಶಿಮ್ಲಾ ಒಪ್ಪಂದದಡಿ ಕಾಶ್ಮೀರ ಸಮಸ್ಯೆ ಪರಿಹರಿಸಿಕೊಳ್ಳಬೇಕು ಎಂದು ಗುಟೆರಸ್ ಅವರ ಸಹಾಯಕ ವಕ್ತಾರ ಫರ್ಹಾನ್ ಹಕ್ ಹೇಳಿದ್ದಾರೆ. ವಿಶ್ವಸಂಸ್ಥೆಯ ಸನದು(ಚಾರ್ಟರ್) ಮತ್ತು ಮಾನವ ಹಕ್ಕುಗಳಿಗೆ ಸಂಪೂರ್ಣ ಗೌರವದ ಅನುಸಾರವಾಗಿ ಶಾಂತಿಯತ ವಿಧಾನಗಳ ಮೂಲಕ ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದ ಸಮಸ್ಯೆಗೆ ಅಂತಿಮ ಇತ್ಯರ್ಥವನ್ನು ಕಂಡುಕೊಳ್ಳಬೇಕು. ವಿಶ್ವಸಂಸ್ಥೆಯ ನಿಲುವು ವಿಶ್ವಸಂಸ್ಥೆಯ ಸನದು ಮತ್ತು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯಗಳಿಂದ ನಿಯಂತ್ರಿಸಲ್ಪಡುತ್ತದೆ ಎಂದವರು ಹೇಳಿದ್ದಾರೆ.