ಎರಡೂ ಕೈಗಳನ್ನು ಕಳೆದುಕೊಂಡ ಫೆಲೆಸ್ತೀನಿನ ಬಾಲಕನ ಚಿತ್ರಕ್ಕೆ ʼವರ್ಲ್ಡ್ ಫೊಟೋ ಆಫ್ ದ ಇಯರ್ʼ ಗೌರವ

Update: 2025-04-17 20:36 IST
ಎರಡೂ ಕೈಗಳನ್ನು ಕಳೆದುಕೊಂಡ ಫೆಲೆಸ್ತೀನಿನ ಬಾಲಕನ ಚಿತ್ರಕ್ಕೆ ʼವರ್ಲ್ಡ್ ಫೊಟೋ ಆಫ್ ದ ಇಯರ್ʼ ಗೌರವ

Photo : x/WorldPressPhoto

  • whatsapp icon

ದೋಹಾ : ಗಾಝಾದ ಮೇಲಿನ ಇಸ್ರೇಲ್ ಕ್ರೌರ್ಯವನ್ನು ಪ್ರತಿಬಿಂಬಿಸುವ, ಎರಡೂ ಕೈಗಳನ್ನು ಕಳೆದುಕೊಂಡ ಫೆಲೆಸ್ತೀನಿನ ಬಾಲಕನ ಚಿತ್ರಕ್ಕೆ ʼವರ್ಲ್ಡ್ ಫೊಟೋ ಆಫ್ ದ ಇಯರ್ʼ ಗೌರವ ಸಂದಿದೆ.

68ನೇ ಸಾಲಿನ ಪ್ರತಿಷ್ಠಿತ ಛಾಯಾಚಿತ್ರ ಪತ್ರಿಕೋದ್ಯಮ ಪ್ರಶಸ್ತಿಗಾಗಿ 141 ರಾಷ್ಟ್ರಗಳಿಂದ 3778 ಛಾಯಾಗ್ರಾಹಕರು 59,320 ಚಿತ್ರಗಳನ್ನು ಕಳುಹಿಸಿದ್ದರು. ಅವುಗಳಲ್ಲಿ ಸಮರ್‌ ಅವರ ಚಿತ್ರವು ಗಟ್ಟಿಯಾಗಿ ಮಾತನಾಡುವಂತಿತ್ತು. ಇದು ಒಬ್ಬ ಬಾಲಕನ ಕಥೆಯನ್ನು ಹೇಳುತ್ತಿತ್ತು. ಅಷ್ಟೇ ಅಲ್ಲದೆ, ಯುದ್ಧವು ತಲೆಮಾರುಗಳ ಮೇಲೆ ಪ್ರಭಾವ ಬೀರುತ್ತದೆ ಎಂಬುದನ್ನು ತಿಳಿಸಿತು ಎಂದು ವರ್ಲ್ಡ್ ಪ್ರೆಸ್ ಫೋಟೊದ ಕಾರ್ಯ ನಿರ್ವಾಹಕ ನಿರ್ದೇಶಕಿ ಜೌಮನ ಎಲ್ ಝೀನ್ ಖೌರಿ ತಿಳಿಸಿದ್ದಾರೆ.

ಖತರ್ ನಲ್ಲಿ ನೆಲೆಸಿರುವ ಸಮರ್ ಅಬು ಎಲೌಫ್ ಅವರು 9 ವರ್ಷದ ಬಾಲಕ ಮುಹಮ್ಮದ್ ಅಜ್ಜೌರ್ ಅವರ ಚಿತ್ರವನ್ನು ಸೆರೆಹಿಡಿದಿದ್ದಾರೆ. ಸಮರ್ ಅವರು ‘ನ್ಯೂಯಾರ್ಕ್ ಟೈಮ್ಸ್’ ಗೆ ಫೊಟೋಜರ್ನಲಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಗಾಝಾದಲ್ಲಿ ಯುದ್ಧದ ಪರಿಣಾಮ ತನ್ನ ಎರಡೂ ಕೈಗಳನ್ನು ಕಳೆದುಕೊಂಡಿದ್ದ ಬಾಲಕ, ಅಮ್ಮ ನಾನು ನಿನ್ನನ್ನು ಹೇಗೆ ಅಪ್ಪಿಕೊಳ್ಳಲಿ ಎಂದು ತಾಯಿಯನ್ನು ಕೇಳುತ್ತಿದ್ದ. ಅದನ್ನು ಆತನ ತಾಯಿ ಸಮರ್ ಅವರಲ್ಲಿ ಹೇಳಿದ್ದರು. ಪುಟ್ಟ ಬಾಲಕನ ಪ್ರಶ್ನೆಗೆ ಮನಕಲುಕಿದ ಸಮರ್ ಅವರು ನೆರಳು ಬೆಳಕಿನ ಸಂಯೋಜನೆಯಲ್ಲಿ ಮುಹಮ್ಮದ್ ಅಜ್ಜೌರ್ ನ ಚಿತ್ರವನ್ನು ಸೆರೆಹಿಡಿದಿದ್ದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News