ವ್ಯಾಟಿಕನ್‌ನಲ್ಲಿ ಇಂದು ಪೋಪ್ ಫ್ರಾನ್ಸಿಸ್ ಅಂತ್ಯಸಂಸ್ಕಾರ
Update: 2025-04-26 11:40 IST

ವ್ಯಾಟಿಕನ್ : ಕಳೆದ ಸೋಮವಾರ ನಿಧನರಾದ ಪೋಪ್ ಫ್ರಾನ್ಸಿಸ್ ಅವರ ಅಂತ್ಯಸಂಸ್ಕಾರದ ಪ್ರಕ್ರಿಯೆಗಳು ವ್ಯಾಟಿಕನ್‌ನ ಬೆಸಿಲಿಕಾದ ಸಾಂಟಾ ಮಾರಿಯಾ ಮ್ಯಾಗಿಯೋರ್‌ನಲ್ಲಿ ಶನಿವಾರ ಸ್ಥಳೀಯ ಕಾಲಮಾನ 10 ಗಂಟೆಗೆ ಪ್ರಾರಂಭವಾಗಲಿದೆ.
ಪೋಪ್ ಫ್ರಾನ್ಸಿಸ್ ಅವರ ಮೃತದೇಹವನ್ನು ವ್ಯಾಟಿಕನ್ ಸಿಟಿಯಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿದೆ. ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಜಗತ್ತಿನ ಸುಮಾರು 160 ದೇಶಗಳ ಗಣ್ಯರು ಪೋಪ್ ಫ್ರಾನ್ಸಿಸ್ ಅವರ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ.
ಕಳೆದ ಮೂರು ದಿನಗಳಲ್ಲಿ ಸಾರ್ವಜನಿಕ ವೀಕ್ಷಣೆಯ ಸಮಯ ಪೋಪ್ ಅವರನ್ನು ಕೊನೆಯ ಬಾರಿಗೆ ನೋಡಲು ಜಗತ್ತಿನ ವಿವಿಧ ದೇಶಗಳಿಂದ 2,50,000ಕ್ಕೂ ಹೆಚ್ಚು ಜನರು ವ್ಯಾಟಿಕನ್‌ಗೆ ತೆರಳಿದ್ದರು.
ಭಾರತೀಯ ಕಾಲಮಾನ ಶನಿವಾರ ಮಧ್ಯಾಹ್ನ 1.30ಕ್ಕೆ ಸರಳವಾಗಿ ಪೋಪ್ ಪ್ರಾನ್ಸಿಸ್ ಅಂತ್ಯಕ್ರಿಯೆ ನಡೆಯಲಿದೆ.