ಅಮೆರಿಕ ಸರಕಾರ ಕ್ಯಾನ್ಸರ್ ಕೊನೆಗೊಳಿಸಿದೆ ಎಂದ ಅಧ್ಯಕ್ಷ ಬೈಡನ್ !

Update: 2023-07-26 17:58 GMT

ಅಮೆರಿಕದ ಅಧ್ಯಕ್ಷ ಜೋ ಬೈಡನ್ Photo: PTI

ವಾಷಿಂಗ್ಟನ್: ಶ್ವೇತಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ನೀಡಿದ ಹೇಳಿಕೆಯೊಂದು ಈಗ ಬೈಡನ್ ಆಡಳಿತವನ್ನು ಮುಜುಗುರಕ್ಕೆ ಸಿಲುಕಿಸಿದೆ.

ಮಾನಸಿಕ ಆರೋಗ್ಯ ಸಮಸ್ಯೆಯನ್ನು ನಿವಾರಿಸಲು ತಮ್ಮ ಸರಕಾರ ಬದ್ಧವಾಗಿದೆ ಎಂದ ಬೈಡನ್ `ನಿಮಗೆಲ್ಲಾ ತಿಳಿದಿರುವಂತೆ ನಮ್ಮ ಸರಕಾರ ಕ್ಯಾನ್ಸರ್ ಅನ್ನು ಪರಿಣಾಮಕಾರಿಯಾಗಿ ಕೊನೆಗೊಳಿಸಿದೆ' ಎಂದು ಘೋಷಿಸಿದರು.

ಕೋವಿಡ್ ಸಾಂಕ್ರಾಮಿಕವು ಹೆಚ್ಚಿನ ಸಹಾಯದ ಅಗತ್ಯತೆಯನ್ನು ಪ್ರದರ್ಶಿಸಿತು ಎಂದು ಭಾಷಣ ಆರಂಭಿಸಿದ ಬೈಡನ್ ` ಅಮೆರಿಕನ್ನರು ಮಹತ್ಕಾರ್ಯಗಳನ್ನು ಮಾಡಲು ಇತ್ತೀಚೆಗೆ ವಿಶ್ವಾಸವನ್ನು ಯಾಕೆ ಕಳೆದುಕೊಂಡಿದ್ದಾರೆ ಎಂಬ ಪ್ರಶ್ನೆಯನ್ನು ನಾನು ಯಾವಾಗಲೂ ಕೇಳುತ್ತಿರುತ್ತೇನೆ.

ಒಬ್ಬರು ನನ್ನನ್ನು ಕೇಳಿದರು `ನೀವು ಏನನ್ನಾದರೂ ಮಾಡಲು ಸಾಧ್ಯವಾಗುವುದಾದರೆ ಏನು ಮಾಡಲು ಬಯಸುತ್ತೀರಿ' ಎಂದು. ಅದಕ್ಕೆ ನಾನು ಉತ್ತರಿಸಿದೆ- ನಾನು ಕ್ಯಾನ್ಸರ್ ಅನ್ನು ಗುಣಪಡಿಸುತ್ತೇನೆ ಎಂದು. ನಿಮಗೆಲ್ಲಾ ತಿಳಿದಿರುವಂತೆ ನಾವು ಈಗಾಗಲೇ ಕ್ಯಾನ್ಸರ್ ಅನ್ನು ಕೊನೆಗೊಳಿಸಿದ್ದೇವೆ' ಎಂದರು.

ಈ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು ವ್ಯಾಪಕ ಲೇವಡಿಗೆ ಗುರಿಯಾಗಿದೆ. `ಮೆದುಳು ನಿಷ್ಕ್ರಿಯಗೊಂಡಿರುವ ಅಧ್ಯಕ್ಷರು ಕ್ಯಾನ್ಸರ್ ಕೊನೆಗೊಳಿಸಿರುವ ವಿಷಯ ಈಗಷ್ಟೇ ತಿಳಿದುಬಂದಿದೆ' ಎಂದು ಆನ್ಲೈನ್ ಬಳಕೆದಾರರು ಲೇವಡಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News