ಈಜಿಪ್ಟ್ ಅಧ್ಯಕ್ಷರಾಗಿ ಅಲ್-ಸಿಸಿ ಪುನರಾಯ್ಕೆ

Update: 2023-12-18 18:18 GMT

Photo: twitter

ಕೈರೊ: ಈಜಿಪ್ಟ್ ಅಧ್ಯಕ್ಷ ಅಬ್ದುಲ್ ಫತಾಹ್ ಅಲ್-ಸಿಸಿ ಮತ್ತೊಂದು ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಆಯೋಗ ಘೋಷಿಸಿದೆ.

ಡಿಸೆಂಬರ್ 110ರಿಂದ 12ರವರೆಗೆ ನಡೆದ ಚುನಾವಣೆಯಲ್ಲಿ 66.8%ದಷ್ಟು ಮತದಾನವಾಗಿದ್ದು ಅಲ್-ಸಿಸಿ ಅವರು ಚಲಾವಣೆಯಾದ ಮತಗಳಲ್ಲಿ 89.6%ದಷ್ಟು ಮತಗಳನ್ನು ಗಳಿಸಿದ್ದಾರೆ. ಇವರ ನಿಕಟ ಪ್ರತಿಸ್ಪರ್ಧಿ `ರಿಪಬ್ಲಿಕನ್ ಪೀಪಲ್ಸ್ ಪಾರ್ಟಿ'ಯ ಮುಖ್ಯಸ್ಥ ಹಾಸಿಂ ಒಮರ್ 4.5%ದಷ್ಟು ಮತ ಗಳಿಸಿದ್ದಾರೆ ಎಂದು ಆಯೋಗ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News