ನೆತನ್ಯಾಹು ವಿರುದ್ಧ ಇಸ್ರೇಲ್ ನಲ್ಲಿ ಪ್ರತಿಭಟನೆ

Update: 2024-04-21 16:43 GMT

PC : NDTV 

ಟೆಲ್ ಅವೀವ್ : ಹೊಸದಾಗಿ ಚುನಾವಣೆಗಳನ್ನು ನಡೆಸಬೇಕು ಮತ್ತು ಗಾಝಾದಲ್ಲಿ ಬದುಕುಳಿದಿರುವ ಒತ್ತೆಯಾಳುಗಳ ಬಿಡುಗಡೆಗೆ ಹೆಚ್ಚಿನ ಪ್ರಯತ್ನಗಳನ್ನು ಮಾಡಬೇಕು ಎಂದು ಆಗ್ರಹಿಸಿ ಇಸ್ರೇಲ್ನಲ್ಲಿ ಸಾವಿರಾರು ಮಂದಿ ಶನಿವಾರ ಧರಣಿ ನಡೆಸಿದ್ದಾರೆ.

ಈ ಧರಣಿಯು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಜನರು ನಡೆಸಿಕೊಂಡು ಬರುತ್ತಿರುವ ಪ್ರತಿಭಟನೆಗಳ ಮುಂದುವರಿದ ಭಾಗವಾಗಿದೆ.

ಗಾಝಾದ ವಿರುದ್ಧ ಇಸ್ರೇಲ್ ನಡೆಸುತ್ತಿರುವ ಯುದ್ಧವು ಏಳನೇ ತಿಂಗಳನ್ನು ಪ್ರವೇಶಿಸಿರುವಂತೆಯೇ, ಈಗಲೂ ಹಮಾಸ್ನ ಒತ್ತೆಸೆರೆಯಲ್ಲಿರುವ 133 ಇಸ್ರೇಲಿ ಒತ್ತೆಯಾಳುಗಳ ವಿಷಯವನ್ನು ಸರಕಾರ ನಿಭಾಯಿಸುತ್ತಿರುವ ಬಗ್ಗೆ ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಕ್ಟೋಬರ್ 7ರಂದು ದಕ್ಷಿಣ ಇಸ್ರೇಲ್ನ ನಗರಗಳ ಮೇಲೆ ಹಮಾಸ್ ನಡೆಸಿರುವ ಭೀಕರ ದಾಳಿಗೆ ನೆತನ್ಯಾಹುರ ವೈಫಲ್ಯವೇ ಕಾರಣವೆಂದು ಸಮೀಕ್ಷೆಗಳು ಹೇಳುತ್ತಿವೆ.

ಅವಧಿಪೂರ್ವ ಚುನಾವಣೆ ನಡೆಯಬೇಕೆಂಬ ಬೇಡಿಕೆಗಳ ಹೊರತಾಗಿಯೂ, ಈ ಪ್ರಸ್ತಾವವನ್ನು ನೆತನ್ಯಾಹು ತಿರಸ್ಕರಿಸಿದ್ದಾರೆ. ಹೊಸ ಚುನಾವಣೆ ನಡೆದರೆ ನೆತನ್ಯಾಹು ಸೋಲುತ್ತಾರೆ ಎಂದು ಸಮೀಕ್ಷೆಗಳು ಹೇಳುತ್ತಿವೆ.

ಆದರೆ, ಹಾಲಿ ಸಂಘರ್ಷದ ನಡುವೆ ಚುನಾವಣೆ ನಡೆದರೆ ಅದು ಹಮಾಸನ್ನು ಗಟ್ಟಿಗೊಳಿಸುತ್ತದೆ ಎಂಬುದಾಗಿ ನೆತನ್ಯಾಹು ವಾದಿಸಿದ್ದಾರೆ.

ಪ್ರಸಕ್ತ ನಾಯಕತ್ವದಡಿ ದೇಶವು ಹಿನ್ನಡೆ ಅನುಭವಿಸುತ್ತಿದೆ ಎಂದು ಪ್ರತಿಭಟನಕಾರರು ಆರೋಪಿಸಿದ್ದಾರೆ.

ಅಕ್ಟೋಬರ್ 7ರಂದು ನಡೆಸಿದ ದಾಳಿಯ ವೇಳೆ, ಹಮಾಸ್ ಕಾರ್ಯಕರ್ತರು ಸುಮಾರು 1,200 ಮಂದಿಯನ್ನು ಕೊಂದಿದ್ದಾರೆ ಮತ್ತು 253 ಮಂದಿಯನ್ನು ಅಪಹರಿಸಿದ್ದಾರೆ. ಅವರ ಪೈಕಿ ಕೆಲವರನ್ನು ನವೆಂಬರ್ನಲ್ಲಿ ಬಿಡುಗಡೆಗೊಳಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News