ರಶ್ಯ: ವಿರೋಧ ಪಕ್ಷದ ನಾಯಕ ನವಾಲ್ನಿಯ ಜತೆ ಸಂಪರ್ಕದಲ್ಲಿದ್ದ 4 ಪತ್ರಕರ್ತರಿಗೆ ಜೈಲುಶಿಕ್ಷೆ

Update: 2025-04-16 20:56 IST
ರಶ್ಯ: ವಿರೋಧ ಪಕ್ಷದ ನಾಯಕ ನವಾಲ್ನಿಯ ಜತೆ ಸಂಪರ್ಕದಲ್ಲಿದ್ದ 4 ಪತ್ರಕರ್ತರಿಗೆ ಜೈಲುಶಿಕ್ಷೆ

PC : aljazeera.com

  • whatsapp icon

ಮಾಸ್ಕೋ: ರಶ್ಯದ ವಿರೋಧ ಪಕ್ಷದ ನಾಯಕ ಅಲೆಕ್ಸಿ ನವಾಲ್ನಿಗೆ ಜೈಲುಶಿಕ್ಷೆ ವಿಧಿಸಿದ್ದ ನ್ಯಾಯಾಲಯದ ಕಲಾಪಗಳನ್ನು ವರದಿ ಮಾಡಿದ್ದ ನಾಲ್ವರು ಪತ್ರಕರ್ತರಿಗೆ ತಲಾ ಐದೂವರೆ ವರ್ಷ ಜೈಲುಶಿಕ್ಷೆ ವಿಧಿಸಿ ಮಾಸ್ಕೋದ ನಗಾಟಿಂಸ್ಕಿ ಜಿಲ್ಲಾ ನ್ಯಾಯಾಲಯ ಮಂಗಳವಾರ ತೀರ್ಪು ನೀಡಿದೆ.

ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಮುಖ್ಯ ಎದುರಾಳಿಯಾಗಿದ್ದ ನವಾಲ್ನಿಯನ್ನು ರಶ್ಯ ಅಧಿಕಾರಿಗಳು ಉಗ್ರವಾದಿ ಎಂದು ಹೆಸರಿಸಿದ್ದರು. ಅವರ ಪಕ್ಷವನ್ನು ನಿಷೇಧಿಸಲಾಗಿದ್ದು ಅವರ ಜೊತೆ ಸಂಪರ್ಕದಲ್ಲಿದ್ದವರ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ. 2024ರ ಫೆಬ್ರವರಿ 16ರಂದು ನವಾಲ್ನಿ ಜೈಲಿನಲ್ಲಿಯೇ ಕೊನೆಯುಸಿರೆಳೆದಿದ್ದರು. ಕ್ರೀಗರ್ `ಉಗ್ರಗಾಮಿಗಳ ಗುಂಪಿನ ಜೊತೆ ಸಂಪರ್ಕದಲ್ಲಿದ್ದ' ಆರೋಪದಲ್ಲಿ ಕಳೆದ ವರ್ಷ ಬಂಧಿಸಲಾಗಿದ್ದ ಪತ್ರಕರ್ತರಾದ ಅಂಟೊನಿನಾ ಕ್ರವ್ಟ್‍ಸೊವ, ಕೊನ್‍ಸ್ಟಾಂಟಿನ್ ಗ್ಯಬೊವ್, ಸೆರ್ಗೆಯ್ ಕ್ಯಾರೆಲಿನ್ ಮತ್ತು ಆರ್ಟೆಮ್‍ಗೆ ತಲಾ ಐದೂವರೆ ವರ್ಷ ಜೈಲುಶಿಕ್ಷೆ ವಿಧಿಸಲಾಗಿದೆ. ತೀರ್ಪಿನ ವಿರುದ್ಧ ಮೇಲ್ಮನವಿ ದಾಖಲಿಸುವುದಾಗಿ ಪತ್ರಕರ್ತರ ಪರ ವಕೀಲರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News