ಇಸ್ರೇಲ್-ಇರಾನ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆ | ಟರ್ಕಿ, ಚೀನಾ, ಸೌದಿ ವಿದೇಶಾಂಗ ಸಚಿವರಿಗೆ ಕರೆ ಮಾಡಿದ ಬ್ಲಿಂಕೆನ್
Update: 2024-04-12 17:04 GMT
ವಾಷಿಂಗ್ಟನ್: ಇಸ್ರೇಲ್-ಇರಾನ್ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವಂತೆಯೇ ಟರ್ಕಿ, ಚೀನಾ ಮತ್ತು ಸೌದಿ ಅರೇಬಿಯಾದ ವಿದೇಶಾಂಗ ಸಚಿವರಿಗೆ ಕರೆ ಮಾಡಿರುವ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್, ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಉಲ್ಬಣಿಸುವುದು ಯಾರ ಹಿತಾಸಕ್ತಿಗೂ ಪೂರಕವಾಗಿಲ್ಲ ಎಂದು ಸ್ಪಷ್ಟಪಡಿಸಿರುವುದಾಗಿ ಶ್ವೇತಭವನ ಹೇಳಿದೆ.
ಮಧ್ಯಪ್ರಾಚ್ಯದಲ್ಲಿನ ಸಂಘರ್ಷವನ್ನು ಪ್ರಚೋದಿಸಬಾರದು ಎಂದು ಇರಾನ್‍ಗೆ ಎಚ್ಚರಿಕೆ ನೀಡಿರುವ ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಕ್ಯಾಮರಾನ್, ವ್ಯಾಪಕ ಸಂಘರ್ಷವನ್ನು ತಪ್ಪಿಸಲು ಒತ್ತಾಯಿಸಿದ್ದಾರೆ. ಇಸ್ರೇಲ್‍ಗೆ ತನ್ನ ಬೆಂಬಲ ಮುಂದುವರಿಯಲಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಪುನರುಚ್ಚರಿಸಿದ್ದಾರೆ.