ಇರಾನ್ ನಲ್ಲಿ ಸೌದಿ ದೂತಾವಾಸ ಪುನರಾರಂಭ

Update: 2023-08-09 18:07 GMT

Photo: Twitter/@QudsNen

ಟೆಹ್ರಾನ್ : ಇರಾನ್ ನ ರಾಜಧಾನಿ ಟೆಹ್ರಾನ್ನಲ್ಲಿ ಸೌದಿ ಅರೆಬಿಯಾದ ರಾಯಭಾರ ಕಚೇರಿ 7 ವರ್ಷದ ಬಳಿಕ ಪುನರಾರಂಭಗೊಂಡಿದೆ ಎಂದು ಇರಾನ್ ನ ಸರಕಾರಿ ಸ್ವಾಮ್ಯದ `ಇರ್ನಾ' ಸುದ್ಧಿಸಂಸ್ಥೆ ಬುಧವಾರ ವರದಿ ಮಾಡಿದೆ.

2016ರಲ್ಲಿ ಟೆಹ್ರಾನ್ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭ ಸೌದಿ ಅರೆಬಿಯಾದ ರಾಯಭಾರ ಕಚೇರಿಯ ಮೇಲೆ ದಾಳಿ ನಡೆದ ಬಳಿಕ ಸೌದಿ ಅರೆಬಿಯಾ ತನ್ನ ರಾಜತಾಂತ್ರಿಕ ಕಚೇರಿಯನ್ನು ಮುಚ್ಚಿತ್ತು. `ರವಿವಾರದಿಂದ ಇರಾನ್ ನಲ್ಲಿ ಸೌದಿ ಅರೆಬಿಯಾದ ರಾಯಭಾರಿ ಕಚೇರಿ ಅಧಿಕೃತವಾಗಿ ಕಾರ್ಯಾರಂಭ ಮಾಡಿದೆ' ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News