ಚೀನಾದ ಪರಮಾಣು ಶಕ್ತ ಸಬ್ಮೆ್ರಿನ್ ಮುಳುಗಡೆ

Update: 2024-09-27 16:46 GMT

ಸಾಂದರ್ಭಿಕ ಚಿತ್ರ | PC : industantimes

ಬೀಜಿಂಗ್ : ಚೀನಾದ ಹೊಸ ಪರಮಾಣು ಚಾಲಿತ ಸಬ್ಮೆ ರಿನ್ ವುಹಾನ್ ಶಿಪ್ಯಾ್ರ್ಡ್ ಬಳಿ ಮುಳುಗಿರುವುದು ನೌಕಾದಳದ ಸಾಮರ್ಥ್ಯವನ್ನು ಹೆಚ್ಚಿಸುವ ಚೀನಾದ ಮಹಾತ್ವಾಕಾಂಕ್ಷೆಗೆ ತೀವ್ರ ಹಿನ್ನಡೆಯಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಅಮೆರಿಕದ `ವಾಲ್ಸ್ಟ್ರೀ ಟ್ ಜರ್ನಲ್' ವರದಿ ಮಾಡಿದೆ.

ಜೂನ್ನೆಲ್ಲಿ ನಡೆದಿರುವ ಘಟನೆ ಉಪಗ್ರಹಗಳು ರವಾನಿಸಿದ ಫೋಟೋಗಳಿಂದ ದೃಢಪಟ್ಟಿದೆ. ವುಹಾನ್ ಶಿಪ್ಯಾನರ್ಡ್ನದಲ್ಲಿ ತೇಲುವ ಕ್ರೇನ್ಗಂಳ ಸಹಿತ ಅಸಾಮಾನ್ಯ ಚಟುವಟಿಕೆಗಳನ್ನು ಈ ಫೋಟೋಗಳು ಬಹಿರಂಗಪಡಿಸಿವೆ.

ಜುಲೈಯಲ್ಲಿ ದೊರೆತ ಮತ್ತೊಂದು ಚಿತ್ರದಲ್ಲಿ ಕ್ರೇನ್ಗನಳು ಹಡಗುಕಟ್ಟೆಯ ಬಳಿ ಕಾರ್ಯಾಚರಣೆ ಮುಂದುವರಿಸುತ್ತಿರುವುದನ್ನು ತೋರಿಸಿವೆ. ದುರಂತದಲ್ಲಿ ಸಾವು-ನೋವು ಸಂಭವಿಸಿದೆಯೇ ಅಥವಾ ಸಬ್ಮೆಿರಿನ್ನಯಲ್ಲಿ ಪರಮಾಣು ಇಂಧನ ಇತ್ತೇ ಎಂಬ ಮಾಹಿತಿಯಿಲ್ಲ. ಆದರೆ ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿ ಸಮುದ್ರದಡಿಯ ಯುದ್ಧಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಚೀನಾದ ಹಂಬಲಕ್ಕೆ ಇದರಿಂದ ತೀವ್ರ ಹಿನ್ನಡೆಯಾಗಿರುವುದು ಸ್ಪಷ್ಟ ಎಂದು ವರದಿಯಲ್ಲಿ ಪ್ರತಿಪಾದಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News