ಸ್ಪೇನ್ | ಪ್ರವಾಹದಲ್ಲಿ 51 ಸಾವು ; ನದಿಯಂತಾದ ರಸ್ತೆಗಳು

Update: 2024-10-30 22:36 IST
ಸ್ಪೇನ್ | ಪ್ರವಾಹದಲ್ಲಿ 51 ಸಾವು ; ನದಿಯಂತಾದ ರಸ್ತೆಗಳು

PC : PTI

  • whatsapp icon

ಮ್ಯಾಡ್ರಿಡ್ : ಪೂರ್ವ ಸ್ಪೇನ್‌ ನಲ್ಲಿ ಮಂಗಳವಾರ ಸುರಿದ ಧಾರಾಕಾರ ಮಳೆಯ ಬಳಿಕ ವಲೆನ್ಸಿಯಾ ಪ್ರಾಂತದಲ್ಲಿ ಹಠಾತ್ ಪ್ರವಾಹದಿಂದ ಪ್ರಮುಖ ರಸ್ತೆಗಳು ಜಲಾವೃತಗೊಂಡಿದ್ದು ಕನಿಷ್ಟ 51 ಮಂದಿ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ಬುಧವಾರ ಹೇಳಿದ್ದಾರೆ.

ಮನೆಗಳಿಗೆ ನುಗ್ಗಿರುವ ನೆರೆ ನೀರನ್ನು ಹೊರಹಾಕಲು ದೋಣಿಗಳನ್ನು ಬಳಸಲಾಗುತ್ತಿದೆ. ಹಲವೆಡೆ ವಿದ್ಯುತ್ ಪೂರೈಕೆ ಅಸ್ತವ್ಯಸ್ತಗೊಂಡಿರುವುದರಿಂದ ಕತ್ತಲಲ್ಲಿ ರಕ್ಷಣಾ ಕಾರ್ಯಾಚರಣೆಗೆ ತೊಡಕಾಗಿದೆ. ಅತೀ ಹೆಚ್ಚಿನ ಸಮಸ್ಯೆಗೆ ಒಳಗಾದ ಪ್ರದೇಶವನ್ನು ತಲುಪಲು ತುರ್ತು ಕಾರ್ಯಪಡೆಯ ಸದಸ್ಯರು ಹರಸಾಹಸ ಪಡುತ್ತಿದ್ದಾರೆ. ಜಲಾವೃತಗೊಂಡಿರುವ ಮನೆಗಳ ಛಾವಣಿಯ ಮೇಲೆ, ಮರಗಳ ಮೇಲೆ ಆಶ್ರಯ ಪಡೆದಿರುವ ನಿವಾಸಿಗಳನ್ನು ರಕ್ಷಿಸುವ ಕಾರ್ಯಾಚರಣೆ ಮುಂದುವರಿದಿದೆ ಎಂದು ವೆಲೆನ್ಸಿಯಾದ ಅಧಿಕಾರಿ ಕಾರ್ಲೋಸ್ ಮೇಝನ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News