ಸುಡಾನ್: ಅರೆಸೇನಾ ಪಡೆಯ ದಾಳಿಯಲ್ಲಿ 6 ಮೃತ್ಯು

Update: 2025-03-03 22:25 IST
ಸುಡಾನ್: ಅರೆಸೇನಾ ಪಡೆಯ ದಾಳಿಯಲ್ಲಿ 6 ಮೃತ್ಯು

ಸಾಂದರ್ಭಿಕ ಚಿತ್ರ | NDTV


  • whatsapp icon

ಖಾರ್ಟೂಮ್: ಸುಡಾನ್‍ನ ದರ್ಫುರ್ ಪ್ರದೇಶದಲ್ಲಿ ಜನನಿಬಿಡ ಮಾರುಕಟ್ಟೆ ಹಾಗೂ ಸ್ಥಳಾಂತರಿತ ಜನರ ಶಿಬಿರಗಳ ಮೇಲೆ ಅರೆ ಸೇನಾಪಡೆ ನಡೆಸಿದ ಫಿರಂಗಿ ಶೆಲ್ ದಾಳಿಯಲ್ಲಿ 6 ಮಂದಿ ಮೃತಪಟ್ಟಿರುವುದಾಗಿ ಸ್ಥಳೀಯ ಆರೋಗ್ಯಾಧಿಕಾರಿಗಳು ಹೇಳಿದ್ದಾರೆ.

ಉತ್ತರ ದರ್ಫುರ್ ರಾಜ್ಯದ ರಾಜಧಾನಿ ಎಲ್-ಫಶರ್‍ನ ಗಡಿಭಾಗದಲ್ಲಿರುವ ಅಬುಶೌಕ್ ಶಿಬಿರ ಪ್ರದೇಶದ ಮೇಲೆ ಕಳೆದ ವರ್ಷದ ಮೇ ತಿಂಗಳಿಂದ ಅರೆ ಸೇನಾಪಡೆ(ಆರ್‍ಎಸ್‍ಎಫ್) ಮುತ್ತಿಗೆ ಹಾಕಿವೆ. ಜನರು ಅಗತ್ಯ ವಸ್ತುಗಳನ್ನು ಖರೀದಿಸಲು ಹೆಚ್ಚಿನ ಸಂಖ್ಯೆಯಲ್ಲಿ ಮಾರುಕಟ್ಟೆಯಲ್ಲಿ ಗುಂಪು ಸೇರಿದ್ದ ಸಂದರ್ಭದಲ್ಲಿ ಅರೆ ಸೇನಾ ಪಡೆ ಫಿರಂಗಿ ಗುಂಡಿನ ದಾಳಿ ನಡೆಸಿದ್ದು 6 ಅಮಾಯಕ ನಾಗರಿಕರು ಸಾವನ್ನಪ್ಪಿದ್ದಾರೆ. ಇತರ ಹಲವಾರು ಮಂದಿ ಗಾಯಗೊಂಡಿದ್ದು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಥಳೀಯ ತುರ್ತು ಕಾರ್ಯ ನಿರ್ವಹಣಾ ಪಡೆಯ ಮೂಲಗಳು ಹೇಳಿವೆ.

ಎಲ್-ಫಶರ್ ಪ್ರದೇಶದ ಅಬು ಶೌಕ್, ಅಲ್-ಸಲಾಮ್ ಮತ್ತು ಝಮ್‍ಝಮ್ ಶಿಬಿರಗಳಲ್ಲಿ ಬರಗಾಲದ ಛಾಯೆ ಆವರಿಸಿದ್ದು ಮುಂದಿನ ದಿನಗಳಲ್ಲಿ ಇತರ ಐದು ಪ್ರದೇಶಗಳಿಗೆ ಬರಗಾಲ ವಿಸ್ತರಿಸುವ ಸಾಧ್ಯತೆಯಿದೆ ಎಂದು ಡಿಸೆಂಬರ್‍ನಲ್ಲಿ ವಿಶ್ವಸಂಸ್ಥೆ ಬೆಂಬಲಿತ ಪರಿಶೀಲನಾ ಸಮಿತಿ ವರದಿ ಮಾಡಿತ್ತು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News