ಸುಡಾನ್ | ಮಿಲಿಟರಿ ಪದವಿ ಪ್ರದಾನ ಕಾರ್ಯಕ್ರಮದ ಮೇಲೆ ದಾಳಿ: 5 ಮಂದಿ ಮೃತ್ಯು
Update: 2024-07-31 22:19 IST

Photo: Sudanese Armed Forces
ಖಾರ್ಟಮ್ : ಮಿಲಿಟರಿ ಪದವಿ ಪ್ರದಾನ ಸಮಾರಂಭದ ಮೇಲೆ ನಡೆದ ಡ್ರೋನ್ ದಾಳಿಯಲ್ಲಿ ತನ್ನ ಉನ್ನತ ಕಮಾಂಡರ್ ಜ| ಅಬ್ದುಲ್ ಫತಾಹ್ ಬುರ್ಹಾನ್ ಪಾರಾಗಿದ್ದಾರೆ. ಆದರೆ ದಾಳಿಯಲ್ಲಿ ಐದು ಮಂದಿ ಸಾವನ್ನಪ್ಪಿದ್ದಾರೆ ಎಂದು ಸುಡಾನ್‍ನ ಮಿಲಿಟರಿ ಹೇಳಿದೆ.
ಪೂರ್ವ ಸುಡಾನ್‍ನ ಗೆಬೀಟ್ ಎಂಬ ನಗರದಲ್ಲಿ ಮಿಲಿಟರಿ ಪದವಿ ಪ್ರದಾನ ಕಾರ್ಯಕ್ರಮ ಮುಕ್ತಾಯಗೊಂಡಾಗ ಎರಡು ಡ್ರೋನ್‍ಗಳು ದಾಳಿ ನಡೆಸಿವೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಉನ್ನತ ಕಮಾಂಡರ್ ಬುರ್ಹಾನ್ ಸುರಕ್ಷಿತವಾಗಿ ಪಾರಾಗಿದ್ದಾರೆ ಎಂದು ಸೇನೆಯ ವಕ್ತಾರರು ಹೇಳಿದ್ದಾರೆ. ಸುಡಾನ್‍ನಲ್ಲಿ ಕಳೆದ ಒಂದು ವರ್ಷದಿಂದ ಮಿಲಿಟರಿ ಮತ್ತು ಅರೆಸೇನಾ ಪಡೆ `ರ್ಯಾಪಿಡ್ ಸಪೋರ್ಟ್ ಫೋರ್ಸ್' ನಡುವೆ ಘರ್ಷಣೆ ನಡೆಯುತ್ತಿದ್ದು ಹಲವು ಮಂದಿ ಸಾವನ್ನಪ್ಪಿದ್ದಾರೆ.