ಭಾರತಕ್ಕೆ `ಪರಮಾಪ್ತ ರಾಷ್ಟ್ರ' ಸ್ಥಾನಮಾನ ಅಮಾನತುಗೊಳಿಸಿದ ಸ್ವಿಝರ್ಲ್ಯಾಂಡ್

Update: 2024-12-14 16:28 GMT

PC : Freepik

ಬರ್ನ್ : ಭಾರತ ಮತ್ತು ಸ್ವಿಝರ್ಲ್ಯಾಂಡ್ ನಡುವಿನ `ಡಬಲ್ ಟ್ಯಾಕ್ಸ್ ಅವಾಯ್ಡೆನ್ಸ್ ಅಗ್ರಿಮೆಂಟ್'(ಡಿಟಿಎಎ)ನಲ್ಲಿನ ಪರಮಾಪ್ತ ರಾಷ್ಟ್ರ ಸ್ಥಾನಮಾನ(ಎಂಎಫ್‍ಎನ್)ವನ್ನು ಸ್ವಿಝರ್ಲ್ಯಾಂಡ್ ಸರಕಾರ ಅಮಾನತುಗೊಳಿಸಿದೆ. ಇದು ಭಾರತದಲ್ಲಿನ ಸ್ವಿಸ್ ಹೂಡಿಕೆಗಳ ಮೇಲೆ ಪರಿಣಾಮ ಬೀರಬಹುದು ಮತ್ತು ಸ್ವಿಝರ್ಲ್ಯಾಂಡ್‍ನಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಕಂಪೆನಿಗಳ ಮೇಲೆ ಹೆಚ್ಚಿನ ತೆರಿಗೆಗೆ ಕಾರಣವಾಗುತ್ತದೆ.

ಇದೀಗ ಸ್ವಿಝರ್ಲ್ಯಾಂಡ್ ಆ ದೇಶದಲ್ಲಿ ಭಾರತೀಯ ಸಂಸ್ಥೆಗಳು ಗಳಿಸುವ ಲಾಭಾಂಶಗಳಿಗೆ 2025ರ ಜನವರಿ 1ರಿಂದ 10% ತೆರಿಗೆ ವಿಧಿಸಲಿದೆ. ಕಳೆದ ವರ್ಷ ಭಾರತದ ಸುಪ್ರೀಂಕೋರ್ಟ್ ನೀಡಿದ ಆದೇಶದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ವಿಝರ್ಲ್ಯಾಂಡ್ ಸರಕಾರ ಹೇಳಿದೆ. ಒಂದು ದೇಶವು ಒಇಸಿಡಿಗೆ ಸೇರ್ಪಡೆಗೊಳ್ಳುವ ಮೊದಲು ಭಾರತ ಸರಕಾರವು ಆ ದೇಶದೊಂದಿಗೆ ತೆರಿಗೆ ಒಪ್ಪಂದಕ್ಕೆ ಸಹಿ ಹಾಕಿದರೆ, ಆ ದೇಶವು ಒಇಸಿಡಿಗೆ ಸೇರ್ಪಡೆಗೊಂಡಾಗ ಎಂಎಫ್‍ಎನ್ ಷರತ್ತು ಸ್ವಯಂಚಾಲಿತವಾಗಿ ಪ್ರಚೋದಿಸುವುದಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ (ಒಇಸಿಡಿ ಎಂದರೆ ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ). 

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News