ಸುಮಾರು 13,000 ಸಿರಿಯನ್ನರು ಲೆಬನಾನ್‍ಗೆ ಪಲಾಯನ: ವರದಿ

Update: 2025-03-19 21:07 IST
ಸುಮಾರು 13,000 ಸಿರಿಯನ್ನರು ಲೆಬನಾನ್‍ಗೆ ಪಲಾಯನ: ವರದಿ

Photo Credit | X/@Naharnet

  • whatsapp icon

ಬೈರೂತ್: ಈ ತಿಂಗಳ ಆರಂಭದಲ್ಲಿ ಸಿರಿಯಾ ಕರಾವಳಿ ಪ್ರದೇಶದಲ್ಲಿ ವರದಿಯಾದ ಹತ್ಯಾಕಾಂಡದ ಬಳಿಕ ಸುಮಾರು 13,000 ಸಿರಿಯನ್ನರು ಗಡಿ ದಾಟಿ ಲೆಬನಾನ್‍ಗೆ ಪಲಾಯನ ಮಾಡಿರುವುದಾಗಿ ಲೆಬನಾನ್ ಅಧಿಕಾರಿಗಳು ಹೇಳಿದ್ದಾರೆ.

12,798 ಸಿರಿಯನ್ನರು ಗಡಿದಾಟಿ ಬಂದಿದ್ದು ಉತ್ತರ ಲೆಬನಾನ್‍ನ ಅಕ್ಕಾರ್ ಪ್ರಾಂತದ 23 ವಿವಿಧ ಗ್ರಾಮಗಳಲ್ಲಿ ನೆಲೆಗೊಂಡಿದ್ದಾರೆ. ಹೆಚ್ಚಿನವರು ತಾತ್ಕಾಲಿಕ ಶಿಬಿರಗಳಿಗೆ ಸ್ಥಳಾಂತರಗೊಂಡಿದ್ದಾರೆ ಎಂದು ಲೆಬನಾನ್‍ನ ವಿಪತ್ತು ಅಪಾಯ ನಿರ್ವಹಣಾ ಘಟಕದ ವರದಿ ಹೇಳಿದೆ. ಪದಚ್ಯುತ ಅಧ್ಯಕ್ಷ ಬಶರ್ ಅಸ್ಸಾದ್‍ಗೆ ನಿಷ್ಠರಾಗಿರುವ ಅಲವೈತ್ ಅಲ್ಪಸಂಖ್ಯಾತ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವ ಸಿರಿಯಾದ ಕರಾವಳಿ ಪ್ರದೇಶದಲ್ಲಿ ಸಂಭವಿಸಿದ್ದ ಹಿಂಸಾಚಾರದಲ್ಲಿ ಕನಿಷ್ಟ 1,557 ನಾಗರಿಕರು ಸಾವನ್ನಪ್ಪಿದ್ದಾರೆ. ಸಾವಿರಾರು ಜನರು ನೆರೆಯ ಲೆಬನಾನ್‍ಗೆ ಪಲಾಯನ ಮಾಡಿದ್ದರೆ ಕೆಲವರು ಸಿರಿಯಾದಲ್ಲಿರುವ ರಶ್ಯದ ವಾಯುನೆಲೆಯಲ್ಲಿ ರಕ್ಷಣೆ ಪಡೆದಿದ್ದರು ಎಂದು ಮಾನವ ಹಕ್ಕುಗಳ ಏಜೆನ್ಸಿ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News