ಕಡಲಡಿಯ ಕೇಬಲ್ ಸಂಪರ್ಕ ಕಡಿತ: ಚೀನೀ ಸಿಬ್ಬಂದಿಗಳಿದ್ದ ಹಡಗು ವಶಕ್ಕೆ ಪಡೆದ ತೈವಾನ್

Update: 2025-02-25 21:52 IST
ಕಡಲಡಿಯ ಕೇಬಲ್ ಸಂಪರ್ಕ ಕಡಿತ: ಚೀನೀ ಸಿಬ್ಬಂದಿಗಳಿದ್ದ ಹಡಗು ವಶಕ್ಕೆ ಪಡೆದ ತೈವಾನ್

Photo Credit : AFP

  • whatsapp icon

ತೈಪೆ: ಸಮುದ್ರದ ಅಡಿ ಹಾಕಲಾಗಿದ್ದ ಟೆಲಿಕಾಂ ವಯರು ಕಡಿತಗೊಂಡ ಪ್ರಕರಣಕ್ಕೆ ಸಂಬಂಧಿಸಿ ಚೀನಾದ ಸಿಬ್ಬಂದಿಗಳಿದ್ದ ಹಡಗನ್ನು ವಶಕ್ಕೆ ಪಡೆದಿರುವುದಾಗಿ ತೈವಾನ್‌ ನ ಕರಾವಳಿ ಭದ್ರತಾ ಪಡೆ ಮಂಗಳವಾರ ಹೇಳಿದೆ.

ತೈವಾನ್ ಜಲಸಂಧಿಯಲ್ಲಿನ ಆಯಕಟ್ಟಿನ ದ್ವೀಪ ಪೆಂಘು ಮತ್ತು ತೈವಾನ್ ನಡುವೆ ಟೆಲಿಕಾಂ ಸಂಪರ್ಕ ಕಲ್ಪಿಸುವ ಸಮುದ್ರದಡಿಯ ಕೇಬಲ್ ಮಂಗಳವಾರ ಬೆಳಿಗ್ಗೆ ಕಡಿತಗೊಂಡಿದೆ ಎಂದು ತೈವಾನ್‌ ನ ಚುಂಗ್ವಾ ಟೆಲಿಕಾಂ ಸಂಸ್ಥೆ ವರದಿ ಮಾಡಿದೆ.

ಈ ಪ್ರದೇಶದಲ್ಲಿದ್ದ , ಟೋಗೋ ದೇಶದಲ್ಲಿ ನೋಂದಣೆಗೊಂಡಿದ್ದ ಹಡಗನ್ನು ತಡೆದು ತೈವಾನ್‍ಗೆ ಕರೆದೊಯ್ಯಲಾಗಿದ್ದು ಪ್ರಕರಣನ್ನು ರಾಷ್ಟ್ರೀಯ ಭದ್ರತಾ ಪ್ರಕರಣದಡಿ ನಿರ್ವಹಿಸಲಾಗುತ್ತಿದೆ. ಸಮುದ್ರದಡಿಯ ಕೇಬಲ್ ತುಂಡಾಗಿದ್ದು ಆಕಸ್ಮಿಕವೇ ಅಥವಾ ಉದ್ದೇಶಪೂರ್ವಕ ವಿಧ್ವಂಸಕ ಕೃತ್ಯವೇ ಎಂಬುದನ್ನು ಮುಂದಿನ ವಿಚಾರಣೆ ಖಚಿತಪಡಿಸಲಿದೆ. `ಹಾಂಗ್ಟೈ ಎಂಬ ಹೆಸರಿನ ಹಡಗು ಚೀನಾದ ಆರ್ಥಿಕ ನೆರವು ಪಡೆದಿದ್ದು ಇದರಲ್ಲಿ 8 ಚೀನೀ ಸಿಬ್ಬಂದಿಗಳಿದ್ದರು ಎಂದು ಕರಾವಳಿ ರಕ್ಷಣಾ ಪಡೆಯ ಅಧಿಕಾರಿಗಳು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News