ನ್ಯೂಯಾರ್ಕ್ | ಹಿಂದೂ ದೇವಸ್ಥಾನದಲ್ಲಿ ದುಷ್ಕೃತ್ಯ

Update: 2024-09-17 14:49 GMT

 PC : BAPS WEBSITE

ನ್ಯೂಯಾರ್ಕ್: ನ್ಯೂಯಾರ್ಕ್‍ನ ಮೆಲಿವಿಲ್ಲೆ ಹಾಗೂ ಉತ್ತರ ಅಮೆರಿಕಾದ್ಯಂತದ ಹಲವು ಹಿಂದೂ ದೇವಸ್ಥಾನಗಳಲ್ಲಿ ದ್ವೇಷ ಸಾರುವ ಸಂದೇಶವನ್ನು ಬರೆದು ವಿರೂಪಗೊಳಿಸಲಾಗಿದೆ ಎಂದು ವರದಿಯಾಗಿದೆ.

ಘಟನೆಯನ್ನು ಬಿಎಪಿಎಸ್ ಸ್ವಾಮಿನಾರಾಯಣ ಸಂಸ್ಥ ಖಂಡಿಸಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳನ್ನು ಆಗ್ರಹಿಸಿದೆ.ನ್ಯೂಯಾರ್ಕ್‍ನ ದೇವಾಲಯದ ಮೇಲಿನ ದಾಳಿಯು ಖಲಿಸ್ತಾನಿ ಗುಂಪುಗಳು ನಡೆಸಿದ ದ್ವೇಷಾಪರಾಧದ ಕೃತ್ಯಗಳಾಗಿವೆ ಎಂದು ಉನ್ನತ ಗುಪ್ತಚರ ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ. ದೇವಸ್ಥಾನದ ಎದುರಿನ ರಸ್ತೆ ಹಾಗೂ ದೇವಸ್ಥಾನದ ನಾಮಫಲಕದ ಮೇಲೆ ಗೀಚಲಾಗಿರುವ ಅಸಭ್ಯ ಬರಹಗಳನ್ನು ಸಾಮಾಜಿಕ ಮಾಧ್ಯಮಗಳು ಪ್ರಸಾರ ಮಾಡಿವೆ.

ಈ ರೀತಿಯ ಘಟನೆಗಳು ಸ್ವೀಕಾರಾರ್ಹವಲ್ಲ ಎಂದು ನ್ಯೂಯಾರ್ಕ್‍ನಲ್ಲಿನ ಭಾರತದ ಕಾನ್ಸುಲೇಟ್ ಜನರಲ್ ಖಂಡಿಸಿದ್ದು ಈ ಅಪರಾಧ ಕೃತ್ಯದ ತನಿಖೆಯಲ್ಲಿ ಅಧಿಕಾರಿಗಳ ಜತೆ ಸಹಕರಿಸುವುದಾಗಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News