ಥೈಲ್ಯಾಂಡ್: ಸಮುದ್ರಕ್ಕೆ ಉರುಳಿದ ಲಘು ವಿಮಾನ; 5 ಮಂದಿ ಮೃತ್ಯು

Update: 2025-04-25 21:34 IST
ಥೈಲ್ಯಾಂಡ್: ಸಮುದ್ರಕ್ಕೆ ಉರುಳಿದ ಲಘು ವಿಮಾನ; 5 ಮಂದಿ ಮೃತ್ಯು

PC : X \ @Headlin35006781

  • whatsapp icon

ಬ್ಯಾಂಕಾಕ್: ಥೈಲ್ಯಾಂಡ್ ನ ಹುವಾ ಹಿನ್ ವಿಮಾನ ನಿಲ್ದಾಣದ ಬಳಿ ಶುಕ್ರವಾರ ಥೈಲ್ಯಾಂಡ್ ಪೊಲೀಸ್ ಇಲಾಖೆಯ ಲಘು ವಿಮಾನವೊಂದು ಸಮುದ್ರಕ್ಕೆ ಉರುಳಿದ್ದು ಕನಿಷ್ಠ 5 ಮಂದಿ ಮೃತಪಟ್ಟಿದ್ದಾರೆ ಮತ್ತು ಒಬ್ಬ ಗಾಯಗೊಂಡಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಪ್ಯಾರಾಚೂಟ್ ತರಬೇತಿಗಾಗಿ ಬಳಸುತ್ತಿದ್ದ ಲಘು ವಿಮಾನ ಫೆಟ್ಚಾಬುರಿ ಪ್ರಾಂತದ ರೆಸಾರ್ಟ್ ನಗರ ಚಾ-ಆಮ್ ಬಳಿ ಶುಕ್ರವಾರ ಬೆಳಿಗ್ಗೆ ಸಮುದ್ರಕ್ಕೆ ಪತನಗೊಂಡಿದ್ದು ವಿಮಾನದಲ್ಲಿದ್ದ ಐದು ಮಂದಿ ಸಾವನ್ನಪ್ಪಿದ್ದು ಓರ್ವ ಗಾಯಗೊಂಡಿರುವುದಾಗಿ ಪ್ರಾಥಮಿಕ ವರದಿ ಹೇಳಿದೆ. ಕಡಲ ತೀರದ ಬಳಿ ಅವಳಿ ಇಂಜಿನ್‍ನ ಲಘುವಿಮಾನ ಸಮುದ್ರಕ್ಕೆ ಪತನಗೊಳ್ಳುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News