ವಾಯುಮಾಲಿನ್ಯ ಸಮಸ್ಯೆ ನಿಯಂತ್ರಿಸುವಲ್ಲಿ ವಿಫಲವಾದ ಫ್ರಾನ್ಸ್ ಸರಕಾರಕ್ಕೆ ಹೆಚ್ಚುವರಿ ದಂಡ ವಿಧಿಸಿದ ನ್ಯಾಯಾಲಯ

Update: 2023-11-26 17:00 GMT

ಫ್ರಾನ್ಸ್: ಎರಡು ಪ್ರಮುಖ ನಗರಗಳಲ್ಲಿ ವಾಯುಮಾಲಿನ್ಯ ಸಮಸ್ಯೆಯನ್ನು ನಿಯಂತ್ರಿಸುವಲ್ಲಿ ವಿಫಲವಾದ ಫ್ರಾನ್ಸ್ ಸರಕಾರಕ್ಕೆ ಅಲ್ಲಿನ ಉನ್ನತ ನ್ಯಾಯಾಲಯ ಹೆಚ್ಚುವರಿ ದಂಡ ವಿಧಿಸಿದೆ ಎಂದು ವರದಿಯಾಗಿದೆ.

ಪ್ಯಾರಿಸ್ ಮತ್ತು ಲಿಯೋನ್ ನಗರದಲ್ಲಿನ ವಾಯುಮಾಲಿನ್ಯ ಸಮಸ್ಯೆ ಬಿಗಡಾಯಿಸಿದ್ದು ಗಾಳಿಯಲ್ಲಿನ ನೈಟ್ರೋಜನ್ ಡೈಯಾಕ್ಸೈಡ್ ಮಟ್ಟ ನಿಗದಿತ ಮಿತಿಗಿಂತ ಕೆಳಗಿದೆ. ಈ ನಗರಾಡಳಿತಗಳು ರೂಪಿಸಿರುವ ಹಾಲಿ ಯೋಜನೆ ವಾಯುಮಾಲಿನ್ಯ ಸಮಸ್ಯೆ ನಿಯಂತ್ರಣಕ್ಕೆ ಸಾಕಾಗದು ಎಂದು ಹೇಳಿರುವ ನ್ಯಾಯಾಲಯ ಫ್ರಾನ್ಸ್ ಸರಕಾರಕ್ಕೆ 10 ದಶಲಕ್ಷ ಯುರೋ(1 ಯುರೋ 1.09 ಡಾಲರ್‍ಗೆ ಸಮ) ದಂಡ ವಿಧಿಸಿದೆ. ಈ ದಂಡದಲ್ಲಿ ಬಹುಪಾಲು ವಾಯುಮಾಲಿನ್ಯ ಮತ್ತು ಹವಾಮಾನ ಬದಲಾವಣೆ ಸಮಸ್ಯೆ ವಿರುದ್ಧ ಹೋರಾಡುತ್ತಿರುವ ಸಂಘಟನೆಗಳಿಗೆ ಸಲ್ಲಲಿದೆ ಎಂದು ನ್ಯಾಯಾಲಯ ಆದೇಶಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News