ವಿಶ್ವದ ಅಗ್ರ 10 ಅತ್ಯಂತ ಶಕ್ತಿಶಾಲಿ ಮಿಲಿಟರಿ: ಅಮೆರಿಕ ಪ್ರಥಮ, ರಶ್ಯ ದ್ವಿತೀಯ; ಭಾರತಕ್ಕೆ 4ನೇ ಸ್ಥಾನ
Update: 2025-04-17 23:31 IST
Photo: PTI
ಲಂಡನ್, ಎ.17: ವಿಶ್ವದ ಅತ್ಯಂತ ಶಕ್ತಿಶಾಲಿ ಮಿಲಿಟರಿಗಳನ್ನು ಹೊಂದಿರುವ ಅಗ್ರ 10 ರಾಷ್ಟ್ರಗಳನ್ನು `ದಿ ಗ್ಲೋಬಲ್ ಫೈರ್ಪವರ್ ಇಂಡೆಕ್ಸ್-2025' ಬಿಡುಗಡೆಗೊಳಿಸಿದ್ದು ಅಮೆರಿಕ ಅಗ್ರಸ್ಥಾನದಲ್ಲಿದೆ. ಭಾರತ 4ನೇ ಸ್ಥಾನ ಪಡೆದಿದ್ದರೆ ಕಳೆದ ವರ್ಷ 9ನೇ ಸ್ಥಾನದಲ್ಲಿದ್ದ ಪಾಕಿಸ್ತಾನ 12ನೇ ಸ್ಥಾನಕ್ಕೆ ಕುಸಿದಿದೆ.
ರಕ್ಷಣಾ ತಂತ್ರಜ್ಞಾನ, ಹಣಕಾಸು ಸಂಪನ್ಮೂಲಗಳು, ಲಾಜಿಸ್ಟಿಕ್ಸ್, ಭೌಗೋಳಿಕತೆ ಮತ್ತು ಕಾರ್ಯತಂತ್ರದ ಸ್ಥಾನೀಕರಣದಂತಹ 60ಕ್ಕೂ ಹೆಚ್ಚು ನಿಯತಾಂಕಗಳನ್ನು ಆಧರಿಸಿ ಶ್ರೇಯಾಂಕಗಳನ್ನು ನಿರ್ಧರಿಸಲಾಗಿದೆ. ಈ ಪಟ್ಟಿಯ ಪ್ರಕಾರ ಅಮೆರಿಕ ಪ್ರಥಮ, ರಶ್ಯ ದ್ವಿತೀಯ, ಚೀನಾ ತೃತೀಯ, ಭಾರತ ನಾಲ್ಕು, ದಕ್ಷಿಣ ಕೊರಿಯಾ ಐದು, ಬ್ರಿಟನ್ ಆರು, ಫ್ರಾನ್ಸ್ 7, ಜಪಾನ್ 8, ಟರ್ಕಿ 9, ಇಟಲಿ 10ನೇ ಸ್ಥಾನದಲ್ಲಿದೆ.