ಚೀನಾದ ಪೈಲಟ್‍ಗಳಿಗೆ ತರಬೇತಿ: ಅಮೆರಿಕ ವಾಯುಪಡೆ ಎಚ್ಚರಿಕೆ

Update: 2023-09-09 15:24 GMT

ಸಾಂದರ್ಭಿಕ ಚಿತ್ರ Photo: twitter/@usairforce

ವಾಷಿಂಗ್ಟನ್: ಚೀನಾದ ಮಿಲಿಟರಿ ಪೈಲಟ್‍ಗಳಿಗೆ ತರಬೇತಿ ನೀಡಲು ತರಬೇತುದಾರರನ್ನು ನೇಮಕ ಮಾಡಿಕೊಳ್ಳುವ ಸಂಸ್ಥೆಗಳು ನೀಡುವ ಆಹ್ವಾನದ ಬಗ್ಗೆ ಎಚ್ಚರಿಕೆ ವಹಿಸುವಂತೆ ಅಮೆರಿಕದ ವಾಯುಪಡೆಯ ಉನ್ನತ ಅಧಿಕಾರಿಗಳು ವಾಯುಪಡೆಯ ಪೈಲಟ್‍ಗಳಿಗೆ ಎಚ್ಚರಿಕೆ ನೀಡಿದ್ದಾರೆ.

ವಿದೇಶದ ಸಶಸ್ತ್ರ ಪಡೆಗಳಿಗೆ ತರಬೇತಿ ನೀಡಲು ತರಬೇತುದಾರರನ್ನು ನೇಮಕಾತಿ ಮಾಡಿಕೊಳ್ಳುವ ಮಾಹಿತಿ ದೊರಕಿದರೆ ತಕ್ಷಣ ಆ ಬಗ್ಗೆ ವರದಿ ಸಲ್ಲಿಸುವಂತೆ ವಾಯುಪಡೆ ಸಿಬಂದಿ ಮುಖ್ಯಸ್ಥ ಜನರಲ್ ಚಾಲ್ರ್ಸ್ ಬ್ರೌನ್ ಸೂಚಿಸಿದ್ದಾರೆ. `ಮೂಲಭೂತವಾಗಿ, ಈ ವಿದೇಶಿ ಕಂಪೆನಿಗಳೊಂದಿಗೆ ತರಬೇತುದಾರರಿಗೆ ತರಬೇತಿ ನೀಡುವ ಒಪ್ಪಂದವನ್ನು ಸ್ವೀಕರಿಸುವ ಮೂಲಕ ಅನೇಕರು  ನಮ್ಮ ರಾಷ್ಟ್ರೀಯ ಭದ್ರತೆಯನ್ನು ನಾಶಪಡಿಸುತ್ತಿದ್ದಾರೆ. ಈ ಸಂಸ್ಥೆಗಳು ತರಬೇತಿ ಪಡೆದ ಅಮೆರಿಕ ಮತ್ತು ನೇಟೊದ ಸೇನಾಸಿಬಂದಿಗಳನ್ನು ವಿದೇಶದಲ್ಲಿ ಚೀನೀ ಜನರಿಗೆ ತರಬೇತಿ ನೀಡಲು ಮತ್ತು ಅವರ ಮಿಲಿಟರಿ ಸಾಮಥ್ರ್ಯಗಳಲ್ಲಿನ ಅಂತರವನ್ನು ತುಂಬಲು ಗುರಿಯಾಗಿಸಿಕೊಂಡಿವೆ' ಎಂದು ಅವರು ಎಚ್ಚರಿಸಿದ್ದಾರೆ.

ಚೀನೀ ಸಿಬಂದಿಗಳಿಗೆ ತರಬೇತಿ ಒದಗಿಸಲು ಅಮೆರಿಕದ ಪೈಲಟ್‍ಗಳನ್ನು ನೇಮಕಾತಿ ಮಾಡಿಕೊಳ್ಳುವ ಸಂಸ್ಥೆಗಳಿಗೆ ರಫ್ತುಗಳನ್ನು ಅಮೆರಿಕ ಈಗಾಗಲೇ ನಿರ್ಬಂಧಿಸಿದೆ. ವಿಮಾನವಾಹಕ ನೌಕೆಗಳಿಂದ ವಿಮಾನಗಳನ್ನು ಹಾರಿಸುವ ಚೀನಾದ ಪೈಲಟ್‍ಗಳ ಸಾಮಥ್ರ್ಯವನ್ನು ಸುಧಾರಿಸಲು ಚೀನಾದ ಮಿಲಿಟರಿ ಅನುಭವಿ ಪಾಶ್ಚಿಮಾತ್ಯ ಪೈಲಟ್‍ಗಳನ್ನು ನೇಮಿಸಿಕೊಳ್ಳಲು  ಪ್ರಯತ್ನಿಸುತ್ತಿದೆ. ಅಮೆರಿಕದೊಂದಿಗೆ ಸಂಘರ್ಷ ನಡೆದರೆ ಇದು ಉಪಯುಕ್ತವಾಗಲಿದೆ ಎಂಬುದು ಚೀನೀಯರ ಯೋಜನೆಯಾಗಿದೆ ಎಂದು `ವಾಷಿಂಗ್ಟನ್ ಪೋಸ್ಟ್' ವರದಿ ಮಾಡಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ವಾಷಿಂಗ್ಟನ್‍ನಲ್ಲಿನ ಚೀನಾದ ರಾಯಭಾರಿ ಕಚೇರಿಯ ವಕ್ತಾರ ಲಿಯು ಪೆಂಗ್ಯು ` ಸಂಬಂಧಿತ  ಸಂಸ್ಥೆಗಳು ನಡೆಸುವ ಸಾಮಾನ್ಯ ವ್ಯಾಪಾರ ಚಟುವಟಿಕೆಗಳನ್ನು ಗೌರವಿಸುವಂತೆ ಅಮೆರಿಕವನ್ನು ಒತ್ತಾಯಿಸುತ್ತಿದ್ದೇವೆ. ಇತ್ತೀಚಿನ ವರ್ಷಗಳಲ್ಲಿ ಕೆಲವು ಅಮೆರಿಕನ್ ಅಧಿಕಾರಿಗಳು ವಿನಾಕಾರಣ ಚೀನಾವನ್ನು ದೂಷಿಸುವ ಅಭ್ಯಾಸ ಮುಂದುವರಿಸಿದ್ದು ಇದು ಚೀನಾ-ಅಮೆರಿಕ ಸಂಬಂಧಗಳ ಆರೋಗ್ಯಕರ ಬೆಳವಣಿಗೆಗೆ ಪೂರಕವಲ್ಲ' ಎಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News