ಟ್ರೂಡೊ ಆರೋಪದ ಪಾರದರ್ಶಕ ನಿರ್ವಹಣೆ ಅಗತ್ಯ: ಅಮೆರಿಕ ಪ್ರತಿಕ್ರಿಯೆ

Update: 2023-09-20 17:08 GMT

Photo: twitter/maveinlux

ವಾಷಿಂಗ್ಟನ್: ಖಾಲಿಸ್ತಾನಿ ಪ್ರತ್ಯೇಕತಾವಾದಿ ನಿಜ್ಜಾರ್ ಹತ್ಯೆ ಪ್ರಕರಣದಲ್ಲಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಭಾರತದ ವಿರುದ್ಧ ಗಂಭೀರ ಆರೋಪ ಮಾಡಿದ್ದು , ಈ ವಿಷಯವನ್ನು ಪಾರದರ್ಶಕವಾಗಿ ನಿರ್ವಹಿಸಬೇಕು ಎಂಬುದು ಅಮೆರಿಕದ ನಿಲುವಾಗಿದೆ ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಜಾನ್ ಕಿರ್ಬಿ ಹೇಳಿದ್ದಾರೆ.

ಈ ಆರೋಪಗಳು ಗಂಭೀರವಾಗಿವೆ ಮತ್ತು ಈ ಪ್ರಕರಣವನ್ನು ಕೆನಡಿಯನ್ನರು ತನಿಖೆ ನಡೆಸುತ್ತಿದ್ದಾರೆ ಮತ್ತು ತನಿಖೆಯ ವಿಷಯದಲ್ಲಿ ಹೆಚ್ಚು ಮಾತನಾಡಲು ನಾನು ಬಯಸುತ್ತಿಲ್ಲ. ಈ ತನಿಖೆಯಲ್ಲಿ ಭಾರತವೂ ಸಹಕರಿಸಬೇಕು ಎಂದವರು ಆಗ್ರಹಿಸಿದ್ದಾರೆ. ಈ ಪ್ರಕರಣದ ನ್ಯಾಯೋಚಿತ ಮತ್ತು ಪಾರದರ್ಶಕ ತನಿಖೆ ನಡೆಯಬೇಕು ಮತ್ತು ಈ ವಿಷಯದಲ್ಲಿ ಅಮೆರಿಕ ಎರಡೂ ದೇಶಗಳ ಜತೆ ಸಂಪರ್ಕದಲ್ಲಿರುತ್ತದೆ. ತನಿಖೆ ಯಾವುದೇ ತೊಡಕಿಲ್ಲದೆ ಮುಂದುವರಿಯಬೇಕು ಮತ್ತು ವಾಸ್ತವಾಂಶ ಬೆಳಕಿಗೆ ಬರುವುದು ಅಗತ್ಯವಾಗಿದೆ ಎಂದವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News