ಪೋಪ್ ಅಂತ್ಯಸಂಸ್ಕಾರಕ್ಕೆ ಪತ್ನಿ ಜೊತೆ ಟ್ರಂಪ್ ಭೇಟಿ

Update: 2025-04-22 07:30 IST
ಪೋಪ್ ಅಂತ್ಯಸಂಸ್ಕಾರಕ್ಕೆ ಪತ್ನಿ ಜೊತೆ ಟ್ರಂಪ್ ಭೇಟಿ

PC: x.com/ZachJones

  • whatsapp icon

ವಾಷಿಂಗ್ಟನ್: ಸೋಮವಾರ ನಿಧನರಾದ ಪೋಪ್ ಫ್ರಾನ್ಸಿಸ್ (88) ಅವರ ಅಂತ್ಯಸಂಸ್ಕಾರದಲ್ಲಿ ಪತ್ನಿ ಹಾಗೂ ಅಮೆರಿಕದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಜತೆ ಭಾಗವಹಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಕಟಿಸಿದ್ದಾರೆ.

ಪೋಪ್ ನಿಧನಕ್ಕೆ ಇಡೀ ವಿಶ್ವವೇ ಕಂಬನಿ ಮಿಡಿದಿದೆ. ಐರ್ಲೆಂಡ್, ಗ್ವಾಟಿಮಾಲಾ, ಜಪಾನ್ ಮತ್ತಿತರ ದೇಶಗಳು ಪೋಪ್ ನಿಧನಕ್ಕೆ ಸಂತಾಪ ಸೂಚಿಸಿವೆ.

ಅಮೆರಿಕದಲ್ಲಿ ದೇಶಾದ್ಯಂತ ಪೋಪ್ ಗೌರವಾರ್ಥವಾಗಿ ರಾಷ್ಟ್ರಧ್ವಜವನ್ನು ಅರ್ಧಮಟ್ಟದಲ್ಲಿ ಹಾರಿಸುವಂತೆ ಟ್ರಂಪ್ ಆದೇಶಿಸಿದ್ದಾರೆ. ಎಲ್ಲ ಫೆಡರಲ್ ಕಟ್ಟಡಗಳು, ಮಿಲಿಟರಿ ನೆಲೆಗಳು, ನೌಕಾ ನೆಲೆಗಳು ಮತ್ತು ಅಮೆರಿಕದ ಎಲ್ಲ ಭೂಪ್ರದೇಶಗಳಿಗೆ ಇದು ಅನ್ವಯಿಸುತ್ತದೆ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಪೋಪ್ ಅವರ ಅಂತ್ಯಕ್ರಿಯೆ ನಡೆಯುವ ದಿನ ಸೂರ್ಯಾಸ್ತದ ವರೆಗೂ ಧ್ವಜ ಅರ್ಧಮಟ್ಟದಲ್ಲಿ ಹಾರಲಿದೆ ಎಂದು ಹೇಳಿದ್ದಾರೆ.

"ರೋಮ್ ನಲ್ಲಿ ನಡೆಯುವ ಪೋಪ್ ಫ್ರಾನ್ಸಿಸ್ ಅಂತ್ಯಸಂಸ್ಕಾರದಲ್ಲಿ ಮೆಲಾನಿಯಾ ಮತ್ತು ನಾನು ಭಾಗವಹಿಸಲಿದ್ದೇವೆ." ಎಂದು ಟ್ರಂಪ್ ಟ್ರುಥ್ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ.

ಅಂತ್ಯಕ್ರಿಯೆ ಹಾಗೂ ದಫನ ವಿಧಿವಿಧಾನಗಳು ಧರ್ಮಗುರುವಿನ ಸಾವಿನ ನಾಲ್ಕರಿಂದ ಆರನೇ ದಿನದ ನಡುವೆ ನಡೆಯುತ್ತದೆ. ಇದರ ನಿಖರ ವೇಳಾಪಟ್ಟಿಯನ್ನು ಇನ್ನೂ ಅಂತಿಮಪಡಿಸಬೇಕಿದೆ. 2013ರಿಂದ ಪೋಪ್ ಅವರ ಅಧಿಕಾರಾವಧಿ ಆರಂಭವಾಗಿದ್ದು, ಲ್ಯಾಟಿನ್ ಅಮೆರಿಕದ ಮೂಲದಿಂದ ಬಂದ ಮೊಟ್ಟಮೊದಲ ಪೋಪ್ ಎಂಬ ಹೆಗ್ಗಳಿಕೆ ಅವರದ್ದು. ಪೋಪ್ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವ ಬಗೆಗಿನ ಪ್ರಶ್ನೆಗೆ ಮೊದಲು ಟ್ರಂಪ್ ಸ್ಪಷ್ಟ ಉತ್ತರ ನೀಡಿರಲಿಲ್ಲ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News