ಮತ್ತೆ ಟ್ರಂಪ್ ʼಸುಂಕʼಷ್ಟ; ಆಗ್ನೇಯ ಏಶ್ಯಾದಿಂದ ಸೋಲಾರ್ ಆಮದಿನ ಮೇಲೆ 3,521% ಸುಂಕ ವಿಧಿಸಿದ ಅಮೆರಿಕ!

Update: 2025-04-22 21:35 IST
Trump

ಡೊನಾಲ್ಡ್ ಟ್ರಂಪ್ | PTI 

  • whatsapp icon

ವಾಷಿಂಗ್ಟನ್: ಆಗ್ನೇಯ ಏಶ್ಯಾದ ದೇಶಗಳಿಂದ ಆಮದಾಗುವ ಸೋಲಾರ್ ಉಪಕರಣಗಳ ಮೇಲೆ ಅಮೆರಿಕ ಸರಕಾರ ಗರಿಷ್ಠ 3,521%ದಿಂದ ಕನಿಷ್ಠ 34.4%ದವರೆಗೆ ಸುಂಕ ವಿಧಿಸಿರುವುದಾಗಿ ವರದಿಯಾಗಿದೆ.

ಕಾಂಬೋಡಿಯಾದಿಂದ ಸೋಲಾರ್ ಆಮದುಗಳ ಮೇಲೆ ಗರಿಷ್ಠ 3,521% ಸುಂಕ, ವಿಯೆಟ್ನಾಮ್‍ನಿಂದ ಆಮದಾಗುವ ಸೋಲಾರ್ ಮೇಲೆ 395.9% ಸುಂಕ, ಥೈಲ್ಯಾಂಡ್‍ನಿಂದ ಸೋಲಾರ್ ಆಮದಿನ ಮೇಲೆ 375.2%, ಮಲೇಶ್ಯಾದಿಂದ ಆಮದಾಗುವ ಸೋಲಾರ್ ಮೇಲೆ 34.4% ಸುಂಕ ಜಾರಿಗೊಂಡಿದೆ. ಕಳೆದ ವರ್ಷ ಈ ನಾಲ್ಕೂ ದೇಶಗಳಿಂದ 12.9 ಶತಕೋಟಿ ಡಾಲರ್ ಮೊತ್ತದ ಸೋಲಾರ್ ಉಪಕರಣಗಳನ್ನು ಅಮೆರಿಕ ಆಮದು ಮಾಡಿಕೊಂಡಿದೆ. ಈಗಾಗಲೇ ಈ ದೇಶಗಳ ಮೇಲೆ ವಿಧಿಸಿರುವ 10% ಸುಂಕಕ್ಕೆ ಹೆಚ್ಚುವರಿಯಾಗಿ ಹೊಸ ಸುಂಕ ವಿಧಿಸಿರುವುದಾಗಿ ಟ್ರಂಪ್ ಆಡಳಿತ ಘೋಷಿಸಿದೆ.

ಈ ದೇಶಗಳಲ್ಲಿರುವ ಚೀನಾದ ಸಂಸ್ಥೆಗಳು ಚೀನಾದಿಂದ ಸಬ್ಸಿಡಿಯ ಲಾಭ ಪಡೆದು ಅಗ್ಗದ ದರದಲ್ಲಿ ಸೋಲಾರ್ ಉಪಕರಣಗಳನ್ನು ಉತ್ಪಾದಿಸಿ ಅಮೆರಿಕದ ಮಾರುಕಟ್ಟೆಗೆ ಸುರಿಯುತ್ತಿರುವುದು ತನಿಖೆಯಿಂದ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ಅಮೆರಿಕ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News