ಉಕ್ರೇನ್ ಯಾವತ್ತಾದರೂ ರಶ್ಯಕ್ಕೆ ಸೇರಲೂ ಬಹುದು: ಟ್ರಂಪ್

Update: 2025-02-11 23:00 IST
ಉಕ್ರೇನ್ ಯಾವತ್ತಾದರೂ ರಶ್ಯಕ್ಕೆ ಸೇರಲೂ ಬಹುದು: ಟ್ರಂಪ್

ಡೊನಾಲ್ಡ್ ಟ್ರಂಪ್ | PC : NDTV 

  • whatsapp icon

ನ್ಯೂಯಾರ್ಕ್ : ಉಕ್ರೇನ್ ದೇಶವು ಎಂದಾದರೂ ಒಂದು ದಿನ ರಶ್ಯಕ್ಕೆ ಸೇರಲೂ ಬಹುದು ಎಂದು ಡೊನಾಲ್ಡ್‌ಟ್ರಂಪ್ ಸೋಮವಾರ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಫಾಕ್ಸ್ ನ್ಯೂಸ್ ಸುದ್ದಿವಾಹಿನಿಗೆ ಸೋಮವಾರ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಮೂರು ವರ್ಷಗಳಿಂದ ನಡೆಯುತ್ತಿರುವ ರಶ್ಯ-ಉಕ್ರೇನ್ ಸಮರ ಕೊನೆಯಾಗಬೇಕೆಂಬ ಇಂಗಿತವನ್ನು ವ್ಯಕ್ತಪಡಿಸಿದರು.

‘‘ ಉಕ್ರೇನ್ ರಶ್ಯದೊಂದಿಗೆ ಒಪ್ಪಂದ ಮಾಡಿಕೊಳ್ಳಲೂ ಬಹುದು, ಇಲ್ಲದೆ ಇರಬಹುದು. ಅಷ್ಟೇ ಏಕೆ ಒಂದು ದಿನ ಅದು ರಶ್ಯದ ಜೊತೆ ಸೇರಲೂ ಬಹುದು ಅಥವಾ ಹಾಗಾಗದೆ ಇರಲೂ ಬಹುದು ’’ ಎಂದು ಟ್ರಂಪ್ ಅಭಿಪ್ರಾಯಿಸಿದರು.

ಉಕ್ರೇನ್‌ನಲ್ಲಿರುವ ಅತ್ಯಪೂರ್ವ ಖನಿಜ ಸಂಪನ್ಮೂಲಗಳ ಕುರಿತ ತನ್ನ ಆಸಕ್ತಿಯನ್ನು ಕೂಡಾ ಟ್ರಂಪ್ ಸಂದರ್ಶನದಲ್ಲಿ ವ್ಯಕ್ತಪಡಿಸಿದರು. ಉಕ್ರೇನ್‌ಗೆ ರಶ್ಯ ನೀಡುತ್ತಿರುವ ನೆರವಿಗೆ ಬದಲಿಯಾಗಿ ಆ ದೇಶವು ಅದರಲ್ಲಿರುವ ಅಪರೂಪದ ಖನಿಜಗಳ ಉತ್ಖನನಕ್ಕೆ ಅವಕಾಶ ನೀಡಬೇಕೆಂದು ಅವರು ಹೇಳಿದರು. ‘‘ ಉಕ್ರೇನ್‌ಗೆ ಅಮೆರಿಕದ ಬಹಳಷ್ಟು ಹಣ ಹೋಗುತ್ತಿದೆ. ನನಗೆ ಆದು ವಾಪಸ್ ಬರಬೇಕಾಗಿದೆ. 500 ಶತಕೋಟಿ ಡಾಲರ್‌ಗೆ ಸಮಾನವಾದ ಮೌಲ್ಯದ ಖನಿಜಗಳನ್ನು ನಾನು ಬಯಸುತ್ತಿದ್ದೇನೆ’’ ಎಂದು ಟ್ರಂಪ್ ಏಹಳಿದರು

ರಶ್ಯ-ಉಕ್ರೇನ್ ಸಮರವನ್ನು ಕೊನೆಗೊಳಿಸುವ ಪ್ರಸ್ತಾವನೆಯ ಕರಡನ್ನು ರೂಪಿಸಲು ತನ್ನ ವಿಶೇಷ ಪ್ರತಿನಿಧಿ ಕೀತ್ ಕೆಲ್ಲೊಗ್ ಅವರನ್ನು ತಕ್ಷಣವೇ ಉಕ್ರೇನ್‌ಗೆ ಕಳುಹಿಸಿಕೊಡುವುದಾಗಿ ಟ್ರಂಪ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News