ಅಮೆರಿಕ: ಆರೈಕೆ ಕೇಂದ್ರದ ಮೇಲೆ ಅಪ್ಪಳಿಸಿದ ಕಾರು; 4 ಮಂದಿ ಸಾವು
Update: 2025-04-29 22:43 IST

ಸಾಂದರ್ಭಿಕ ಚಿತ್ರ
ವಾಷಿಂಗ್ಟನ್: ಅಮೆರಿಕದ ಇಲಿನಾಯ್ಸ್ ರಾಜ್ಯದ ಚಥಾಮ್ ನಗರದಲ್ಲಿನ `ಡೇ ಕೇರ್ ಸೆಂಟರ್'(ಆರೈಕೆ ಕೇಂದ್ರ)ದ ಆವರಣಕ್ಕೆ ಕಾರು ಅಪ್ಪಳಿಸಿದ ದುರಂತದಲ್ಲಿ ಕನಿಷ್ಠ 4 ಮಂದಿ ಸಾವನ್ನಪ್ಪಿದ್ದು ಇತರ 6 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಮೃತಪಟ್ಟವರು 4 ರಿಂದ 18 ವರ್ಷದೊಳಗಿನ ಹುಡುಗಿಯರು. ಅವರ ಬಗ್ಗೆ ಹೆಚ್ಚಿನ ವಿವರವನ್ನು ಬಹಿರಂಗಪಡಿಸಲಾಗದು ಎಂದು ಚಥಾಮ್ ಪೊಲೀಸ್ ಉಪಮುಖ್ಯಸ್ಥ ಸ್ಕಾಟ್ ಟಾರ್ಟರ್ ಹೇಳಿದ್ದಾರೆ. ಆರೈಕೆ ಕೇಂದ್ರದ ಆವರಣ ಗೋಡೆಯನ್ನು ಧ್ವಂಸಗೊಳಿಸಿದ ಕಾರು ಕೇಂದ್ರದ ಹೊರಗೆ ಆಯೋಜಿಸಲಾಗಿದ್ದ ಹೊರಾಂಗಣ ಶಿಬಿರದಲ್ಲಿ ಪಾಲ್ಗೊಂಡವರತ್ತ ನುಗ್ಗಿದೆ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿರುವುದಾಗಿ ವರದಿ ಹೇಳಿದೆ.