ಇಸ್ರೇಲನ್ನು ನೆಲಸಮಗೊಳಿಸುತ್ತೇವೆ; ಇರಾನ್

Update: 2025-02-22 20:51 IST
Iran and Israel Flag

ಸಾಂದರ್ಭಿಕ ಚಿತ್ರ | PC : aljazeera.com

  • whatsapp icon

ಟೆಹ್ರಾನ್ : ಇಸ್ರೇಲ್ ಅನ್ನು ನೆಲಸಮಗೊಳಿಸಲು `ಆಪರೇಷನ್ ಟ್ರೂ ಪ್ರಾಮಿಸ್' ಅನ್ನು ಸಕಾಲದಲ್ಲಿ ಆರಂಭಿಸುವುದಾಗಿ ಇರಾನ್ ಶನಿವಾರ ಎಚ್ಚರಿಕೆ ನೀಡಿದೆ. ಇರಾನ್‌ ನ ಬೆದರಿಕೆಯನ್ನು ಎದುರಿಸಲು ನಾವು ಸದಾ ಸಿದ್ಧರಿದ್ದೇವೆ ಎಂದು ಇಸ್ರೇಲ್ ಪ್ರತಿಕ್ರಿಯಿಸಿದೆ.

ಟೆಹ್ರಾನ್‌ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಇರಾನ್‌ ನ ಇಸ್ಲಾಮಿಕ್ ರೆವೊಲ್ಯುಷನರಿ ಗಾರ್ಡ್ ಕಾಪ್ರ್ಸ್(IRGC)ನ ಉನ್ನತ ಕಮಾಂಡರ್ ಇಬ್ರಾಹಿಂ ಜಬ್ಬಾರಿ ` ಇಸ್ರೇಲನ್ನು ಧ್ವಂಸಗೊಳಿಸುವ ಸಾಮರ್ಥ್ಯವಿರುವ `ಆಪರೇಷನ್ ಟ್ರೂ ಪ್ರಾಮಿಸ್ 3' ಅನ್ನು ಇರಾನ್ ಸರಿಯಾದ ಸಮಯದಲ್ಲಿ ನಡೆಸಲಿದೆ ಎಂದು ಹೇಳಿದ್ದಾರೆ.

ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಇಸ್ರೇಲ್‍ ನ ವಿದೇಶಾಂಗ ಸಚಿವ ಗಿಡಿಯನ್ ಸಾ'ರ್ `ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಮತ್ತು ಇಸ್ರೇಲ್ ತನ್ನನ್ನು ರಕ್ಷಿಸಿಕೊಳ್ಳಲು ಸಿದ್ಧವಿದೆ' ಎಂದು `ಎಕ್ಸ್'ನಲ್ಲಿ ಟ್ವೀಟ್ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News