ಕಲಬುರಗಿ ದಕ್ಷಿಣ ಮತಕ್ಷೇತ್ರದಲ್ಲಿ 34 ಕೋಟಿ ವೆಚ್ಚದಲ್ಲಿ 39 ಕಿಮೀ ಗ್ರಾಮೀಣ ರಸ್ತೆ ನಿರ್ಮಾಣ: ಶಾಸಕ ಅಲ್ಲಂಪ್ರಭು ಪಾಟೀಲ್

ಕಲಬುರಗಿ: ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ರೂಪಿಸಿರುವ ಕಲ್ಯಾಣ ಪಥ ಯೋಜನೆಯಡಿಯಲ್ಲಿ ಕಲಬುರಗಿ ದಕ್ಷಿಣ ಮತಕ್ಷೇತ್ರದಲ್ಲಿ ಬರುವ ಹಳ್ಳಿಗಳ ಸಂಪರ್ಕ ರಸ್ತೆ ಅಭಿವೃದ್ಧಿಗೆ ಬದ್ಧ ಎಂದಿರುವ ಶಾಸಕ ಅಲ್ಲಂಪ್ರಭು ಪಾಟೀಲ್ ರಸ್ತೆ ನಿರ್ಮಾಣದ 6 ಕಾಮಗಾರಿಗಳಿಗೆ ಚಾಲನೆ ನೀಡಿದರು.
ಕಲ್ಯಾಣ ಪಥ ಯೋಜನೆ ಗ್ರಾಮೀಣ ರಸ್ತೆಗಳ ಸುಧಾರಣೆಗೆ ವರದಾನವಾಗಿದೆ. ಕಲಬುರಗಿ ದಕ್ಷಿಣದಲ್ಲಿ 34 ಕೋಟಿ ರು ವೆಚ್ಚದಲ್ಲಿ 39 ಕಿಮಿ ರಸ್ತೆ ನಿರ್ಮಾಣಕ್ಕೆ ಯೋಜನೆ ರೂಪಿಸಿ ಜಾರಿಗೆ ತರಲಾಗುತ್ತಿದೆ. ಹಳ್ಳಿಯ ಜನ ಶೀಘ್ರದಲ್ಲೇ ಉತ್ತಮ ಹಾಗೂ ಸುಗಮ ರಸ್ತೆ ಸಂಪರ್ಕ ಹೊಂದಲಿದ್ದಾರೆಂದು ತಿಳಿಸಿದರಮ್
ತಾಜಸುಲ್ತಾನಪೂರ, ಹುಣಸಿ ಹಡಗೀಲ್ ಹಾಗೂ ಪಟ್ಟಮ ಬಳಿ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿ ಬಹಿರಂಗ ಸಭೆಗಳಲ್ಲಿ ಅವರು ಮಾತನಾಡಿದರು. ತಮ್ಮ ಸರ್ಕಾರ ಪಂಚ ಗ್ಯಾರಂಟಿಗಳ ಜತೆಗೇ ಅಭಿವೃದ್ಧಿಗೂ ಬದ್ಧ ಎಂಬುದಕ್ಕೆ ಕಲ್ಯಾಣ ಪಥ ಕನ್ನಡಿ ಎಂದರು.
ಹುಣಸಿಹಡಗಿಲ್ ಗ್ರಾಮದಲ್ಲಿ ಕಲ್ಯಾಣ ಪಥ ಯೋಜನೆಯ ಅಡಿಯಲ್ಲಿ ರೂ. 940.ಲಕ್ಷಗಳ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಹುಣಸಿಹಡಗಿಲ್-ಗೊಬ್ಬುರ ಕೆ. (ವ್ಹಾಯ: ಮೇಳಕುಂದ ಬಿ ಕ್ರಾಸ್, ಮಳನಿ) ರಸ್ತೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.
ಅದೇ ರೀತಿಯಲ್ಲಿ ತಾಜಸುಲ್ತಾನಪೂರ ಗ್ರಾಮದಲ್ಲಿ ಕಲ್ಯಾಣ ಪಥ ಯೋಜನೆ ಅಡಿಯಲ್ಲಿ ರೂ.100.ಲಕ್ಷಗಳ ವೆಚ್ಚದಲ್ಲಿ ನಿರ್ಮಾಣವಾಗಲಿರುವ ತಾಜಸುಲ್ತಾನಪೂರ-ಸೈಯದ ಚಿಂಚೋಳಿ ರಸ್ತೆ ನಿರ್ಮಾಣ ಕಾಮಗಾರಿಗೂ ಗುದ್ದಲಿ ಪೂಜೆ ನೆರವೇರಿಸಿದರು.
ಇನ್ನು ರಾಜ್ಯ ಹೆದ್ದಾರಿ ಎಸ್‌ಎಚ್- 10 ರಿಂದ ಪಟ್ಟಣ ಗ್ರಾಮದ ವರೆಗಿನ 1. 65 ಕೋಟಿ ರು ಮೊತ್ತದಲ್ಲಿ 1. 95 ಕಿಮೀ ರಸ್ತೆ ಕಾಮಗಾರಿಗೆ ಪೂಜೆ ನೆರವೇರಿಸಿದರು.
ಈ ಸಂದರ್ಭಗಳಲ್ಲಿ ಗುಂಡೂರಾವ ಮುತ್ಯಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ ಕಣ್ಣಿ, ಭೀಮರಾವ ಪಾಟೀಲ್, ಚಂದ್ರಗೌಡ, ವೀರಣ್ಣ ದಬಕಿ, ಅಪ್ಪಾರಾವ ಪಟ್ಟಣ, ಪಿಎಂಜಿಎಸ್‌ವೈ ಇಂಜಿನಿಯರ್ ಖಾದ್ರಿ, ಪ್ರಭು, ಶಾಂತರಾಜ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.