ಕಲಬುರಗಿ | ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ; ಚಾಲಕ ಪ್ರಾಣಾಪಾಯದಿಂದ ಪಾರು
Update: 2025-02-21 12:08 IST

ಕಲಬುರಗಿ : ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಲಾರಿಯೊಂದು ಪಲ್ಟಿಯಾಗಿರುವ ಘಟನೆ ಕಮಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಭೀಮನಾಳ ಕ್ರಾಸ್ ಹತ್ತಿರದ ತಿರುವಿನಲ್ಲಿ ನಡೆದಿದೆ.
ಹುಮನಾಬಾದ್ ನಿಂದ ಕಲಬುರಗಿ ಕಡೆಗೆ ಲಾರಿ ಬರುವಾಗ ಭೀಮನಾಳ ಕ್ರಾಸ್ ಬಳಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ್ದು, ರಸ್ತೆ ಬದಿಗೆ ಲಾರಿ ಪಲ್ಟಿಯಾಗಿ ಪಕ್ಕದ ಮರಕ್ಕೆ ಢಿಕ್ಕಿ ಹೊಡೆದಿದೆ.
ಚಾಲಕನಿಂದ ಸಣ್ಣ ಪುಟ್ಟ ಗಾಯಗಳಾಗಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.