ಎ.28ರಂದು ಅಜಾದಪೂರದಲ್ಲಿ ಅಂಬೇಡ್ಕರ್ ಜಯಂತಿ: ಬಾಬುರಾವ ಬಡಿಗೇರ

Update: 2025-04-26 18:32 IST
ಎ.28ರಂದು ಅಜಾದಪೂರದಲ್ಲಿ ಅಂಬೇಡ್ಕರ್ ಜಯಂತಿ: ಬಾಬುರಾವ ಬಡಿಗೇರ
  • whatsapp icon

ಕಲಬುರಗಿ: ಬುದ್ಧ, ಬಸವ, ಅಂಬೇಡ್ಕರ್ ಅವರ ವಿಚಾರಗಳನ್ನು ಗ್ರಾಮದ ಜನರಿಗೆ ತಿಳಿಸಲು ಏ.28 ರಂದು ಅಜಾದಪೂರದಲ್ಲಿ ಡಾ.ಬಿ.ಆರ್.ಅಂಬೇಡ್ಕರವರ ಜಯಂತಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಉತ್ಸವದ ಪ್ರಧಾನ ಕಾರ್ಯದರ್ಶಿ ಬಾಬುರಾವ ಬಡಿಗೇರ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಏ.28 ರಂದು ಬೆಳಗ್ಗೆ 8 ಗಂಟೆಗೆ ಹಾಗರಗಾ ಗ್ರಾ.ಪಂ. ಉಪಾಧ್ಯಕ್ಷೆ ಮೀನಾಕ್ಷಿ ಸೂರ್ಯಕಾಂತ ಧ್ವಜಾರೋಹಣ ನೆರವೇರಿಸುವರು. ನಂತರ 10.30ಕ್ಕೆ ಡಾ.ಬಿ.ಆರ್.ಅಂಬೇಡ್ಕರವರ ಭಾವಚಿತ್ರ ಮೆರವಣಿಗೆ ಕಲಬುರಗಿ ಸಬ್ ಆರ್ಬನ್ ಎಸಿಪಿ ಡಿ.ಜಿ.ರಾಜಣ್ಣ ಚಾಲನೆ ನೀಡುವರು. ಬಳಿಕ ಸಂಜೆ 6 ಗಂಟೆಗೆ ಬಹಿರಂಗ ಸಭೆ ಹಮ್ಮಿಕೊಳ್ಳಲಾಗಿದೆ. ಈ ವೇಳೆ ಬುದ್ಧ ವಿಹಾರದ ಸಂಗಾನಂದ ಭಂತೇಜಿ ಸಾನಿಧ್ಯ ವಹಿಸುವರು. ಶಾಸಕ ಬಸವರಾಜ ಮತ್ತಿಮಮಡು ಉದ್ಘಾಟಿಸುವರು. ಮಹಾನಗರ ಪಾಲಿಕೆ ಮಹಾಪೌರ ಯಲ್ಲಪ್ಪ ನಾಯಕೊಡಿ, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಗು.ವಿ.ಕ ಕುಲಪತಿ ಪ್ರೋ.ಗೂರು ಶ್ರೀರಾಮಲು, ಗು.ವಿ.ಕ. ಕುಲಸಚಿವ ಪ್ರೊ.ರಮೇಶ ಲಂಡನಕರ್, ಡಿ.ಎಸ್.ಎಸ್ (ಕ್ರಾಂತಿಕಾರಿ) ರಾಜ್ಯ ಸಂಚಾಲಕ ಅರ್ಜುನ ಭದ್ರೆ ಮುಖ್ಯ ಅತಿಥಿಗಳಾಗಿ ಭಾಗಿಯಾಗುವರು. ಅಲ್ಲದೆ, ಕಡಗಂಚಿ ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಪಕ ಅಪ್ಪಗೇರೆ ಸೋಮಶೇಖರ, ಡಾ.ಅಂಬೇಡ್ಕರ್ ಪದವಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಪಕ ಅರುಣ ಜೋಳದಕೂಡ್ಲಿಗಿ ಮುಖ್ಯ ಭಾಷಣಕಾರಗಿ ಆಗಮಿಸುವರು ಎಂದರು.

ಬಹಿರಂಗ ಸಭೆಯಲ್ಲಿ ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಪದವಿ, ಸ್ನಾತಕ್ಕೋತ್ತರ , ಪಿ.ಹೆಚ್.ಡಿ, ಪದವಿ ಹಾಗೂ ನೀಟ್ ಪರೀಕ್ಷೆಯಲ್ಲಿ ಹೆಚ್ಚು ಅಂಕಪಡೆದು ಎಂ.ಬಿ.ಬಿ.ಎಸ್. ಶೀಟ್ ಪಡೆದ ಗ್ರಾಮದ ವಿದ್ಯಾರ್ಥಿಗಳಿಗೆ ಹಾಗೂ ಸಿ.ಇ.ಟಿಯಲ್ಲಿ ಹೆಚ್ಚು ಅಂಕ ಪಡೆದುಕೊಂಡು ಇಂಜಿನಿಯರಿಂಗ್ ಇತರ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಗುವುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಲಕ್ಷ್ಮಣ ಮೇಲಿನಕೇರಿ, ಬಸಣ್ಣಾ ಗದ್ದಿ, ಸೂರ್ಯಕಾಂತ ನಾಕಮನ್, ಶಿವಶರಣಪ್ಪಾ, ಲೋಹಿತ ಕೋರೆ, ರಮೇಶ ಕಟ್ಟಿಮನಿ, ಶರಣು ಕೋರೆ, ಸುಭಾಷ್ ಪೂಜಾರಿ, ಸುಭಾಷ್ ಕೋರೆ ಸೇರಿದಂತೆ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News