ಕಲಬುರಗಿ: ಸಿಮೆಂಟ್ ಕಾರ್ಖಾನೆಯ ನೌಕರರ ಪ್ರತಿಭಟನೆಯಲ್ಲಿ ಮಾಜಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಭಾಗಿ

ಕಲಬುರಗಿ: ರಾಜಶ್ರೀ ಅಲ್ಟ್ರಾಟೆಕ್ ಸಿಮೆಂಟ್ ಕಾರ್ಖಾನೆಯ ಪ್ಯಾಕಿಂಗ್ ಮತ್ತು ಲೋಡಿಂಗ್ ಆಧಾರದ ಮೇಲೆ ಕಾರ್ಮಿಕರಿಗೆ ಮೂಲಭೂತ ಸೌಲಭ್ಯಗಳನ್ನು ನೀಡುವುದು ಮತ್ತು ಕಾರ್ಮಿಕರಿಗೆ ಡ್ಯೂಟಿ ಶಿಪ್ಟ್ ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ವತಿಯಿಂದ ನಗರದ ಡಿಸಿ ಕಚೇರಿ ಮುಂದೆ ಅನಿರ್ದಿಷ್ಟ ಧರಣಿ ಸತ್ಯಾಗ್ರಹದಲ್ಲಿ ಸೇಡಂ ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಕಾರ್ಮಿಕರ ಸಮಸ್ಯೆ ಕುರಿತು ನಡೆದ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿದರು.
ಸೇಡಂ ತಾಲೂಕಿನ ಮಳಖೇಡ ಗ್ರಾಮದಲ್ಲಿರುವ ರಾಜಶ್ರೀ ಅಲ್ಟ್ರಾಟೆಕ್ ಸಿಮೆಂಟ್ ಕಾರ್ಖಾನೆಯ ಪ್ಯಾಕಿಂಗ್ ಮತ್ತು ಲೋಡಿಂಗ್ ಆದರದ ಮೇಲೆ ಕೆಲಸ ಮಾಡುವ ಕಾರ್ಮಿಕರಿಗೆ ಸುಮಾರು ವರ್ಷಗಳಿಂದ ಆಗುತ್ತಿರುವ ಸಮಸ್ಯೆಗಳ ಕುರಿತು ಸಂಬಂಧಪಟ್ಟ ಕಾರ್ಮಿಕ ಕಚೇರಿ (ಲೇಬರ್ ಆಫೀಸ್) ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಎದುರುಗಡೆ ಹೋರಾಟ ಮಾಡಿದರು ಕೂಡ ಯಾವುದೇ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ದಿನೇ ದಿನೇ ಕಾರ್ಮಿಕರ ಮೇಲೆ ಕಂಪನಿಯಲ್ಲಿ ಕೆಲಸ ಮಾಡುವ ಸೂಪರ್ವೈಸರ್ ಹಾಗೂ ಅಲ್ಲಿರುವ ಕೆಲವು ವ್ಯಕ್ತಿಗಳಿಂದ ಮನಬಂದಂತೆ ಕಾರ್ಮಿಕರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ರಾಜಶ್ರೀ ಅಲ್ಪಾಟೆಕ್ ಸಿಮೆಂಟ್ ಕಾರ್ಖಾನೆಯ ಹೆಚ್.ಆರ್. ನಾರಾಯಣ ಇವರಿಗೆ ಹಲವಾರು ಬಾರಿ ಭೇಟಿಯಾಗಿ ಮನವಿ ಪತ್ರ ನೀಡಿದರೂ ಸಹ ಯಾವುದೇ ಪ್ರಯೋಜನವಾಗಿರುವುದಿಲ್ಲ. ಆದಷ್ಟು ಬೇಗ ಕಾರ್ಮಿಕರಿಗೆ ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗ ಸಮಸ್ಯೆ ಬಗೆಹರಿಸಬೇಕು ಹಾಗೂ ಅರ್ಜುನ್ ರೋಡ್ ವೈಸ್ ಮತ್ತು ಮಹಾರಾಜ ಗ್ರೂಪ್ ಇವರ ಕಾಂಟಾಕ್ಟ್ ಲೈಸೆನ್ಸ್ ರದ್ದು ಮಾಡಿ ಕಪ್ಪುಪಟ್ಟಿಯಲ್ಲಿ ಹಾಕಬೇಕು ಹಾಗೂ ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಈ ಕಂಪನಿಯಲ್ಲಿ ಸೂಪರ್ವೈಸರ್ ವರ್ಕ್ ಮಾಡುತ್ತಿರುವ ಕೆಲವು ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಂಬೇಡ್ಕರ್ ಸೇವಾ ಸಮಿತಿ ಯುವ ಘಟಕ ಅಧ್ಯಕ್ಷ ಎನ್.ಕೆ. ಅರ್ಜುನ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಸಂದೀಪ ಭರಣಿ, ಬುದ್ದೇಶ್ ಸಿಂಗೆ, ಬಾಗೇಶ್, ಪ್ರಿಯದರ್ಶಿನಿ, ಅಭಿಮನ್ಯಯು, ಮಲ್ಲಿಕಾರ್ಜುನ ಕಟ್ಟಿ ಸೇರಿದಂತೆ ಇತರ ಕಾರ್ಮಿಕರು ಇದ್ದರು.