ಕಾಳಗಿ | ಕರಿಕಲ್ ತಾಂಡದಲ್ಲಿ 64 ಲಕ್ಷ ರೂ. ಕಾಮಗಾರಿಗೆ ಅಡಿಗಲ್ಲು

ಕಲಬುರಗಿ : 2024-25ನೇ ಸಾಲಿನ ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ ಯೋಜನೆ ಅಡಿಯಲ್ಲಿ ಸುಮಾರು 64.87 ಲಕ್ಷ ರೂ. ಅನುದಾನ ಅಡಿಯಲ್ಲಿ ಕಾಳಗಿ ಪಟ್ಟಣದ ಕರಿಕಲ್ ತಾಂಡದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಾ.ಅವಿನಾಶ್ ಜಾಧವ್ ಅಡಿಗಲ್ಲನ್ನು ನೆರವೇರಿಸಿದರು.
ನಂತರ ಮಾತನಾಡಿದ ಅವರು, ಕಾಳಗಿ ತಾಲೂಕು ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ತಾಂಡ ಅಭಿವೃದ್ಧಿ ನಿಗಮ ಅನುದಾನದಲ್ಲಿ ಕರಿಕಲ್ ತಾಂಡದಲ್ಲಿ 49.9 ಲಕ್ಷ ರೂ. ಅನುದಾನದಲ್ಲಿ ಸೇವಾಲಾಲ್ ಮತ್ತು ಮರಿಯಮ್ಮ ದೇವಿ ದೇವಸ್ಥಾನ ಸುತ್ತ ಕಾಂಪೌಂಡ್ ಗೊಡೆ ನಿರ್ಮಾಣ, 4.99 ಲಕ್ಷ ರೂ. ಅನುದಾನದಲ್ಲಿ ಕಾಳಗಿ ಪಟ್ಟಣದ ಬಂಜಾರ ಭವನ ಆವರಣದಲ್ಲಿ ಹೈಮಾಸ್ಕ್ ದ್ವೀಪ ಅಳವಡಿಸುವುದು ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಬಿಜೆಪಿ ಮಂಡಲ ಅಧ್ಯಕ್ಷ ವಿಜಯಕುಮಾರ ಚೆಂಗಟಿ, ಕಾಳಗಿ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಪ್ರಶಾಂತ ಕದಮ, ಗೋಟೂರ ಗ್ರಾಪಂ ಅಧ್ಯಕ್ಷ ಶಿವುಕುಮಾರ ಕಮಕನೋರ, ಮುಖಂಡರಾದ ಚಂದ್ರಕಾಂತ ಜಾಧವ್, ಜಗನ್ನಾಥ ತೇಲಿ, ಸಂತೋಷ ಜಾಧವ, ಸಿಎ ಉಮೇಶ, ಶರಣು ಚಂದಾ, ಶೇಕರ ಪಾಟೀಲ, ಲಿಂಗು ಜಾಧವ್, ಕೇಶುನಾಯಕ ಚವ್ಹಾಣ, ಠಾಕ್ರು ಜಾಧವ್, ದೇವಜಿ ಜಾಧವ್, ಸಂಜುಕುಮಾರ ಜಾಧವ್, ಸುನೀಲ್ ರಾಜಪೂರ, ಶಿವಕುಮಾರ್ ಕೊಡಸಾಲಿ, ಕೃಷ್ಣ ರಾಠೋಡ, ಗಣಪತಿ ಸಿಂಗಶೆಟ್ಟಿ, ಬಲರಾಮ ವಲ್ಲ್ಯಾಪುರೆ, ಹಣಮಂತ ಶೆಗಾಂವಕಾರ ಇತರರು ಇದ್ದರು.