ಕಲಬುರಗಿ | ವಿದ್ಯುತ್ ತಂತಿ ತಗುಲಿ ಬಾಲಕ ಮೃತ್ಯು

Update: 2024-12-11 17:31 GMT

ಸಾಂದರ್ಭಿಕ ಚಿತ್ರ (Meta AI)

ಕಲಬುರಗಿ : ವಿದ್ಯುತ್ ತಂತಿ ತಗುಲಿ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಕಲಬುರಗಿ ನಗರದ ಬಸ್ ಡಿಪೋ 4ರ ಸಮೀಪದಲ್ಲಿರುವ ಬಸವ ನಗರದಲ್ಲಿ ಬುಧವಾರ ಸಂಜೆ ನಡೆದಿದೆ.

ಮೃತ ಬಾಲಕನ್ನು ಮಲ್ಲಿಕಾರ್ಜುನ್ ಮೈತ್ರಿ ಎಂಬವರ ಪುತ್ರ ಕಮಲರಾಜ್ (14) ಎಂದು ಗುರುತಿಸಲಾಗಿದೆ. ಕಮಲರಾಜ್‌, ಕಲಬುರಗಿ ಕೇಂದ್ರ ಬಸ್ ನಿಲ್ದಾಣದ ಎದುರಿರುವ ಡಿವೈಡರ್‌ವೊಂದನ್ನು ದಾಟುವಾಗ ಅತನಿಗೆ ವಿದ್ಯುತ್ ತಂತಿ ತಗುಲಿದ್ದು, ಆಸ್ಪತ್ರೆಗೆ ಸಾಗಿಸುವ ಮಧ್ಯೆಯೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಕುರಿತಾಗಿ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News