ಕಲಬುರಗಿ | ಕೊಲೆ ಆರೋಪಿಯ ಬಂಧನಕ್ಕೆ ಮನವಿ
Update: 2025-04-23 19:03 IST

ಕಲಬುರಗಿ : ಜೇವರ್ಗಿ ತಾಲೂಕಿನ ಹರವಾಳ ಗ್ರಾಮದಲ್ಲಿ ದೌಲಪ್ಪ ಸೀರೆಪ್ಪ ರಾಸಣಗಿ ಎಂಬವರ ಹತ್ಯೆ ಮಾಡಿದ ಆರೋಪಿಯನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ, ಮಾದಿಗ ಸಮಾಜದ ಹಿರಿಯ ಮುಖಂಡರು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಹತ್ಯೆ ಮಾಡಿದ ಆರೋಪಿ ಸಮೀರ್ ಮೈನಾಳನ್ನು ಬಂಧಿಸಿ ಕಾನೂನು ರೀತಿಯ ಸೂಕ್ತ ತನಿಖೆ ಕೈಗೊಳ್ಳಬೇಕೆಂದು ಜೇವರ್ಗಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತಿಭಟನೆ ಮಾಡುವ ಮುಖಾಂತರ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕಂಟೆಪ್ಪ ಮಾಸ್ತರ, ಯಲ್ಲಪ್ಪ ಕುಂಟನೂರ್, ಮಲ್ಲಪ್ಪ ಮಾಸ್ತರ ಕುಳಗೇರಿ,ಮಾನಪ್ಪ ಬಿ ಗೋಗಿ, ಮರೆಪ್ಪ ಕೋಬಾಳ್ಕರ, ಭೀಮರಾಯ ಹಳ್ಳಿ, ಈಶ್ವರ ಹಿಪ್ಪರಗಿ, ಅನಿಲ್ ದೊಡ್ಡಮನಿ, ಸುಭಾಷ್ ಕಾಂಬ್ಳೆ, ಪರಶುರಾಮ್ ಅಳಲ, ಭೀಮು ಆಳಲ್, ಮಲ್ಲಿಕಾರ್ಜುನ ಬಿಲ್ಲರ, ನಾಗರಾಜ ಹಾಲಗೂರ್, ಅಶೋಕ್ ದೊಡ್ಮನಿ ಸೇರಿದಂತೆ ಮುಂತಾದವರು ಇದ್ದರು.